ಶಿವಬಸವ - ಬಸವೇಶ್ವರ ವಚನಗಳು
ಶಿವಶರಣರ ವಚನಗಳ ಬಗ್ಗೆ ಬರೆಯಬೇಕೆಂದು ಬಹಳದಿನದ ಆಸೆಯಿತ್ತು. ಆ ಆಸೆ ಈಗ ಫಲಿಸುತ್ತಿದೆ. ನಮ್ಮ ಕನ್ನಡ ನಾಡಿನ ಎರಡು ವಿಶಿಷ್ಟ ಸಾಹಿತ್ಯ ಪ್ರಕಾರಗಳಾದ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ, ಕನ್ನಡ ಸಾಹಿತ್ಯ ಭಂಡಾರದ ಅನರ್ಘ್ಯ ರತ್ನಗಳಾಗಿವೆ. ೧೨ನೇ ಶತಮಾನದಲ್ಲಿ ಅಂದಿನ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂಡಿಬಂದ ಶಿವಶರಣರ ವಚನಗಳು, ಸಮಾಜದಲ್ಲಿನ ಹುಳುಕುಗಳನ್ನು, ಜಾತಿ ವ್ಯವಸ್ಥೆಯ ವೈಪರೀತ್ಯಗಳನ್ನು ಲೇವಡಿ ಮಾಡಿ ಶಿವನ ಮುಂದೆ ಎಲ್ಲರೂ ಒಂದೇ ಎಂದು ಸಾರಿದ್ದವು. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ ಮುಂತಾದ ಶಿವಶರಣರು ಜನರ ಆಡುಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸಿ, ಹಾಡಿ ಜನರಲ್ಲಿ ಶಿವನ ಬಗ್ಗೆ ಅಚಲ ಭಕ್ತಿಯ ದೀಪವನ್ನು ಬೆಳಗಿಸಿದ್ದರು. ವಿರಶೈವ ಅಥವಾ ಲಿಂಗಾಯಿತ ಮತದ ಪ್ರವರ್ತಕರಾದ ಮಹಾನ್ ಮಾನವತಾವಾದಿ ಬಸವಣ್ಣನವರ ವಚನಗಳ ಮಂಥನ ಮಾಡೋಣ ಬನ್ನಿ. ಶಿವಬಸವ - ಬಸವೇಶ್ವರ ವಚನಗಳ ದ್ವನಿಸುರುಳಿ ನನಗೆ ಅತ್ಯಂತ ಮೆಚ್ಚುಗೆಯಾದ ವಚನಗಳ ದ್ವನಿಸುರುಳಿ. ಆಕಾಶ್ ಆಡಿಯೋ ಸಂಸ್ಥೆ ಹೊರತಂದಿರುವ ಈ ದ್ವನಿಸುರುಳಿಯಲ್ಲಿ, ತೆಲುಗು ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಾದ ಎಂ.ಎಂ.ಕೀರವಾಣಿಯವರು, ಬಸವಣ್ಣನವರ ವಚನಗಳಿಗೆ ಮಧುರವಾದ ಸಂಗೀತ ಸಂಯೋಜಿಸಿ ಸೊಗಸಾಗಿ ಹಾಡಿದ್ದಾರೆ. ಇವರು ರಾಯಚೂರಿನ ವೀರಶೈವ ಮತಾನುಯಾಯಿಗಳು ಹಾಗೂ ಕನ್ನಡಿಗರು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ! ಈ ದ್ವನಿಸುರುಳಿಯಲ್ಲಿನ ಮೊದಲ ವಚನದಲ್ಲಿ ...
Comments
Post a Comment