Posts

Showing posts with the label Rakhi

ತಂಗ್ಯವ್ವ ನೆನಪಾಗುತ್ತಾಳ!

ನಾಗರ ಪಂಚಮಿ, ರಕ್ಷಾಬಂಧನ ಹಬ್ಬಗಳು, ಅಣ್ಣತಂಗಿಯರ/ಅಕ್ಕತಮ್ಮಂದಿರ ಪವಿತ್ರ ಬಾಂಧವ್ಯವನ್ನೇ ಹಬ್ಬವಾಗಿ ಆಚರಿಸುವುದು ಇವುಗಳ ವಿಶೇಷತೆ. ಪಾಶ್ಚಾತ್ಯರಲ್ಲಿ ಪ್ರೇಮಿಗಳ ದಿನವಾದ ವ್ಯಾಲೆಂಟೈನ್ಸ್ ಡೇಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ನಾವು ಭಾರತೀಯರು ಸೋದರ ಸೋದರಿಯರ ನಡುವಿನ ಪರಮಪವಿತ್ರ ಸಂಬಂಧವನ್ನು ನೆನೆಸಿಕೊಂಡು ಅಷ್ಟೇ ಸಂಭ್ರಮದಿಂದ ಆಚರಿಸುವ ಈ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಈ ಸೋದರ ಪ್ರೇಮ ಬರೀ ಒಡಹುಟ್ಟಿದವರಿಗಷ್ಟೇ ಮಾತ್ರ ಸೀಮಿತವಾಗಿಲ್ಲ. ಒಡಹುಟ್ಟಿದ ಸೋದರ-ಸೋದರಿಯರಿಲ್ಲದಿದ್ದರೂ ಬೇರೆಯವರಲ್ಲೇ ಆ ಸೋದರ ಪ್ರೇಮವನ್ನು ಈ ಹಬ್ಬಗಳ ಮೂಲಕ ಕಾಣುವ ಒಂದು ಸುಂದರ ಸಂಸ್ಕೃತಿಯನ್ನು ನಮ್ಮ ಹಿರಿಯರು ನಮಗೆ ಬಿಟ್ಟು ಹೋಗಿದ್ದಾರೆ. ಅಣ್ಣತಂಗಿಯರ ಸಂಬಂಧವನ್ನು ನಮ್ಮ ದೇಶದ ಮಹಾಕಾವ್ಯವಾದ ಮಹಾಭಾರತದಲ್ಲೇ ಬಹಳ ಮನೋಜ್ಞವಾಗಿ ಚಿತ್ರಿಸಿರುವುದನ್ನು ನಾವು ಕಾಣಬಹುದು. ಕೌರವರಿಂದ ಅನೇಕ ರೀತಿಯಲ್ಲಿ ಸಂಕಷ್ಟಗಳನ್ನು ಅನುಭವಿಸಿದವಳು ಪಂಚಪಾಂಡವರ ಪತ್ನಿ ದ್ರೌಪದಿ. ತುಂಬಿದ ಸಭೆಯಲ್ಲಿ ದುರುಳ ದು:ಶ್ಯಾಸನ ಪತಿವ್ರತೆಯಾದ ದ್ರೌಪದಿಯನ್ನು ಎಳೆದು ತಂದು ಅವಳ ವಸ್ತ್ರಾಪಹರಣ ಮಾಡುತ್ತಿದ್ದಾಗ, ತನ್ನ ಐವರು ಗಂಡಂದಿರೂ ಅವಳ ಸಹಾಯಕ್ಕೆ ಬರಲಾಗದೆ ತಲೆತಗ್ಗಿಸಿರುತ್ತಾರೆ. ಆಗ ಅವಳಿಗೆ ಬೇರೆ ಗತಿ ಕಾಣದೆ ತನ್ನ ಅಣ್ಣನಂತೆ ಇರುವ ಶ್ರೀಕೃಷ್ಣನ ನೆನಪಾಗಿ, ರಕ್ಷಿಸುವಂತೆ ಅವನನ್ನೇ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣ ತನ್ನ ತಂಗಿಯಾದ ದ್ರೌಪದಿ೦ii...