Posts

Showing posts with the label Bhavasangama Mysore Ananthaswamy

ಭಾವಸಂಗಮ: ಕನ್ನಡ ಭಾವಗೀತೆಗಳ ಜನಪ್ರಿಯ ಸಂಗ್ರಹ

ತನುವು ನಿನ್ನದು.. ಮನವು ನಿನ್ನದು.. ಎನ್ನ ಜೀವನ ಧನವು ನಿನ್ನದು..ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು..’ ರಾಷ್ಟ್ರಕವಿ ಕುವೆಂಪು ಅವರ ಈ ಕಾವ್ಯಸುಧೆಯನ್ನು ಓದಿದರೇ ರೋಮಾಂಚನವಾಗುತ್ತೆ, ಇನ್ನು ಇದಕ್ಕೆ ಮೈಸೂರು ಅನಂತಸ್ವಾಮಿಯವರ ಸಂಗೀತವೂ ಮೇಳೈಸಿದರೆ ಅದರ ಸೊಗಸೇ ಬೇರೆ ! ಹೌದು ಕವಿಯೊಬ್ಬ ತನ್ನಲ್ಲಿರುವ ಭಾವನೆಗಳನ್ನು ಕಾವ್ಯದ ಮೂಲಕ ಹೊರಗೆಡವುತ್ತಾನೆ. ಆದರೆ ಈ ಕಾವ್ಯ ತಲುಪುವುದು ಓದುವುದರಲ್ಲಿ ಆಸಕ್ತಿಯಿರುವ ಕೆಲವೇ ಕೆಲವು ಮಂದಿಗೆ ಮಾತ್ರ. ಇದೇ ಕಾವ್ಯಕ್ಕೆ ಸುಮಧುರವಾದ ಸಂಗೀತ ಸಂಯೋಜಿಸಿ ಸುಶ್ರಾವ್ಯವಾದ ಕಂಠದಲ್ಲಿ ಹಾಡಿಸಿದರೆ ಅದರ ಗಮ್ಮತ್ತೇ ಬೇರೆ. ಈ ರೀತಿ ಸಂಗೀತ ಸಂಯೋಜಿಸಿದ ಭಾವಗೀತೆಗಳು ಹೆಚ್ಚು ಜನರನ್ನು ತಲುಪಿ ಅವರ ಮನತಣಿಸುತ್ತದೆ. ಕಾವ್ಯವನ್ನು ಓದುವುದಕ್ಕಿಂತ ಅದನ್ನು ಸಂಗೀತದೊಂದಿಗೆ ಕೇಳಿದಾಗ, ಆ ಕಾವ್ಯದಲ್ಲಿರುವ ಭಾವನೆಗಳು ಕೇಳುಗರನ್ನು ಭಾವಲೋಕಕ್ಕೆ ಕರೆದೊಯ್ಯುತ್ತವೆ. ಕನ್ನಡದಲ್ಲಿ ಈ ತರಹದ ಕಾವ್ಯ ಮತ್ತು ಸಂಗೀತದ ಮಿಲನ ವಿಶಿಷ್ಟವಾದ ‘ಸುಗಮ ಸಂಗೀತ’ ಪ್ರಕಾರವನ್ನೇ ಸೃಷ್ಟಿಸಿದೆ. ಭಾರತದ ಭಾಷೆಗಳಲ್ಲೇ ಉರ್ದು ಭಾಷೆಯ ಗಜಲ್‌ಗಳನ್ನು ಹೊರತುಪಡಿಸಿದರೆ, ಕನ್ನಡದ ಸುಗಮ ಸಂಗೀತ ಪ್ರಕಾರ ಅನನ್ಯವಾಗಿದೆ. ಕನ್ನಡದ ‘ಸುಗಮ ಸಂಗೀತ’ ಪ್ರಕಾರ ಬಹಳ ಸುಮಧುರವಾಗಿ, ವಿಶಿಷ್ಟವಾಗಿದೆ ಎಂದು ಪ್ರಖ್ಯಾತ ಹಿನ್ನೆಲೆ ಗಾಯಕರಾದ ಎಸ್.ಪಿ. ಬಾಲಸುಬ್ರಮಣ್ಯಂ ಅವರೇ ತಮ್ಮ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಹೇಳಿದ್...