Posts

Showing posts with the label Rajan Nagendra

ರಾಜನ್-ನಾಗೇಂದ್ರ: ಕನಡ ಚಿತ್ರರಂಗ ಕಂಡ ಪ್ರತಿಭಾವಂತ ಸಂಗೀತ ಸಂಯೋಜಕ ಜೋಡಿ

“ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ, ಕಣ್ಣಲ್ಲೇ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ” ನಾ ನಿನ್ನ ಮರೆಯಲಾರೆ ಚಿತ್ರದ ಈ ಹಾಡನ್ನು ಸಂಪಿಗೆ ಚಿತ್ರಮಂದಿರದಲ್ಲಿ ನೋಡಿದಾಗ ನನಗಿನ್ನೂ ಮೀಸೆ ಚಿಗುರಿರಲಿಲ್ಲ! ಆದರೆ ಈ ಹಾಡು ಮತ್ತು ಅದರ ಮಧುರ ಸಂಗೀತ ಸವಿನೆನೆಪಾಗಿ ನನ್ನನ್ನು ಇನ್ನೂ ಕಾಡುತ್ತಿದೆ. ಅಣ್ಣಾವ್ರು ಮತ್ತು ಲಕ್ಷಿ ಈ ಯುಗಳ ಗೀತೆಯನ್ನು ಚಿತ್ರದಲ್ಲಿ ಹಾಡುತ್ತಿದ್ದಾಗ ಅಭಿಮಾನಿಗಳಿಂದ ಅದೇನು ಶಿಳ್ಳೆ! ಅದೇನು ಚಪ್ಪಾಳೆ!. ನಾನಿನ್ನೂ ಮರೆತಿಲ್ಲ ಆ ಕ್ಷಣ. ಈ ಹಾಡಿಗೆ ಸುಮಧುರ ಸಂಗೀತ ಸಂಯೋಜಿಸಿದ್ದು ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಮತ್ತು ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಜೋಡಿ “ರಾಜನ್-ನಾಗೇಂದ್ರ”. ೧೯೬೫ ರಿಂದ ೧೯೯೦ ರವರೆಗೆ ಕನ್ನಡ ಚಿತ್ರ ರಸಿಕರಿಗೆ ಸುಮಧುರ ಗೀತೆಗಳನ್ನು ರಾಜನ್-ನಾಗೇಂದ್ರ ಅವರು ನೀಡಿದ್ದಾರೆ. ಇವರು ಸಂಗೀತ ಸಂಯೋಜಿಸಿದ ಒಂದೊಂದು ಗೀತೆಗಳೂ ವರುಷಗಳು ಉರುಳಿದರೂ ಇನ್ನೂ ಮನಸ್ಸಿನಲ್ಲಿ ಗುನುಗುವಂತೆ ಹಸಿರಾಗಿವೆ. ಎರಡು-ಕನಸು ಚಿತ್ರದ “ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ”, “ತಂನಂ ತಂನಂ ಮನಸು ಮಿಡಿಯುತಿದೆ.. ” ಎಂಬ ಯುಗಳ ಗೀತೆಗಳಿರಿಲಿ ಅಥವಾ “ಪೂಜಿಸಲೆಂದೇ ಹೂಗಳ ತಂದೆ.. ”, “ಇಂದು ಎನಗೆ ಗೊವಿಂದ.. ” ಎಂಬ ಭಕ್ತಿರಸದಿಂದ ಕೂಡಿದ ಗೀತೆಗಳಿರಲಿ, ಎಲ್ಲ ತರಹದ ಗೀತೆಗಳ ಸಂಗೀತ ಸಂಯೋಜನೆಯಲ್ಲೂ ಇವರದು ಎತ್ತಿದಕೈ. ರಾಜನ್-ನಾಗೇಂದ್ರ ಅವರು ಸಂಗೀತ ಸಂಯೋಜನೆಯಲ್ಲಿ ಮಧುರ ರಾಗ ಸಂಯೋಜನೆಯ ಜೊತೆಗೆ, ...