ಪ್ರಾಣಿಬಲಿ - ನಾವು ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ
ಕೆಲವು ದಿನಗಳ ಹಿಂದೆ ಪ್ರಕಟವಾದ ಒಂದು ವರದಿ, ನಾವು ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ ತರಿಸುವಷ್ಟು ಅಮಾನುಷವಾಗಿತ್ತು. ದಾವಣಗೆರೆಯ ದುರ್ಗಾಂಬಿಕಾ ದೇವಿಯ ಜಾತ್ರೆಯಲ್ಲಿ ಕೋಣವನ್ನೂ , ಸಾವಿರಾರು ಕುರಿಗಳನ್ನು, ಕೋಳಿಗಳನ್ನು ಕ್ರೂರ ಮೃಗಗಳ ಹಾಗೆ ಅಟ್ಟಾಡಿಸಿಕೊಂಡು ಭಕ್ತರೆನಿಸಿಕೊಂಡವರು ದೇವಿಗೆ ಬಲಿಕೊಡುವ ನೆಪದಲ್ಲಿ ಕೊಂದುಹಾಕಿದ್ದರು. ಇಂತಹ ಅಮಾನವೀಯ ಘಟನೆಯನ್ನು ನಗರದ ಪೋಲಿಸರು, ಹಿರಿಯರೆನಿಸಿಕೊಂಡವರು ಮೂಕಪ್ರೇಕ್ಷರಂತೆ ನೋಡಿಕೊಂಡು ಸುಮನಿದ್ದರು. ಇದನ್ನು ನೋಡಿದರೆ ಪ್ರಾಣಿಗಳನ್ನು ಬಲಿಕೊಡುವುದು ಕಾನೂನಿನ ಪ್ರಕಾರ ನಿಷೇದವಾಗಿದ್ದರೂ, ಕಾನೂನು ಪಾಲಕರ, ಆಡಳಿತಗಾರರ ಕೃಪೆಯಿಂದಲೇ, ಇದು ಎಲ್ಲಡೆ ಎಗ್ಗಿಲ್ಲದೆ ನಡೆಯುತ್ತಿರುವುದು ವಿಪರ್ಯಾಸವೆನಿಸುತ್ತದೆ. ನಿಜ ಪ್ರಾಣಿಬಲಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಒಂದು ಧಾರ್ಮಿಕ ಆಚರಣೆ. ಇದನ್ನು ಮೂಡನಂಬಿಕೆ ಎಂದು ನಾವು ಎಷ್ಟೇ ಹೇಳಿದರೂ ಹಿಂದಿನಿಂದ ನಡೆದುಕೊಂಡುಬಂದಿರುವ ಜನರನಂಬಿಕೆಯನ್ನು ಬದಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಅಮಾನವೀಯ ಪ್ರಾಣಿಬಲಿಯ ಆಚರಣೆಯ ಹಿಂದಿರುವ ಮೂಡನಂಬಿಕೆಯನ್ನು, ವಾಸ್ತವತೆಯನ್ನು ಜನರಿಗೆ ಸರಿಯಾಗಿ ತಿಳಿಹೇಳಿ ಅವರನ್ನು ಜಾಗೃತಗೊಳಿಸಿ ಇಂತಹ ಅಮಾನುಷ ಆಚರಣೆಯನ್ನು ನಿಲ್ಲಿಸುವಂತೆ ಅವರ ಮನವೊಲಿಸಲು ಪ್ರಜ್ಞಾವಂತರು, ಪ್ರಾಣಿದಯಾ ಸಂಸ್ಥೆಗಳು ಕಾರ್ಯೋನ್ಮುಖರಾಗಬೇಕಿದೆ. ಸಾಮಾನ್ಯವಾಗಿ ದುರ್ಗಿಯ ಗುಡಿ ಅಥವಾ ಅಮ್ಮನ ಗುಡಿಗಳಲ್ಲೇ ಹೆಚ್ಚಾಗಿ ಪ್ರಾಣಿಬಲಿ...