ಆಂಜನೇಯ ಸ್ತೋತ್ರ (ಕನ್ನಡ)




ಆಂಜನೇಯ ಸ್ತೋತ್ರ (ಕನ್ನಡ ಅನುವಾದ)

ಅಂಜನಾಸುತನ ವೀರನ ಜಾನಕಿಯ ಶೋಕನಾಶಕನ
ಕಪಿರಾಯನ ಅಕ್ಷಯಕುಮಾರನ ವಧಿಸಿದವನ
ಲಂಕೆಗೆ ಭಯಂಕರನಾದವನಿಗೆ ವಂದಿಸುವೆನು

ಕೆಂಪಾದ ಮುಖದ ಆಂಜನೇಯನ
ಕಾಂಚನಪರ್ವತದಂತೆ ಶೋಭಿಸುತ್ತಿರುವವನ
ಪಾರಿಜಾತ ವೃಕ್ಷದಡಿ ವಾಸಿಸುವವನ
ಪವನಸುತನ ಧ್ಯಾನಿಸುವೆನು

ಮನೋಜಯ ಸಾಧಿಸಿದ ಮಾರುತ ವೇಗಿ
ಜಿತೇಂದ್ರಿಯನೂ ಬುದ್ಧಿವಂತರಲ್ಲೇ ವರಿಷ್ಠನೂ
ವಾಯುಪುತ್ರನೂ ವಾನರಯೋಧರಲ್ಲೇ ಮುಖ್ಯನೂ
ಆದ ಶ್ರೀ ರಾಮಧೂತನಿಗೆ ಶಿರಬಾಗಿ ನಮಿಸುವೆನು

ಎಲ್ಲೆಲ್ಲಿ ರಾಮನಾಮ ಕೀರ್ತನೆಯೋ
ಅಲ್ಲೆಲ್ಲ ತಲೆಬಾಗಿ ಕೈಮುಗಿದು ನಿಲ್ಲುವ
ಆನಂದಭಾಷ್ಪ ತುಂಬಿದ ಕಣ್ಣುಗಳಿರುವ
ರಾಕ್ಷಸಾಂತಕ ಮಾರುತಿಗೆ ನಮಿಸುವೆನು

ಹನುಮನ ಸ್ಮರಣೆ ಮಾಡಿದರೆ
ಬುದ್ಧಿಬಲವನ್ನೂ ಯಶಸ್ಸು ಧೈರ್ಯವನ್ನೂ
ನಿರ್ಭಯವನ್ನು ಆರೋಗ್ಯವನ್ನು ಕೊಟ್ಟು
ಜಡತ್ವವನ್ನು ನಿವಾರಿಸಿ ವಾಕ್ಪಾಟುತ್ವವನ್ನು ದಯಪಾಲಿಸುವನು

ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಜೈ ಆಂಜನೇಯ ಜಯ ಹನುಮ

ಸಂಪಿಗೆ ಶ್ರೀನಿವಾಸ

Comments

Popular posts from this blog

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

ಶಿವಬಸವ - ಬಸವೇಶ್ವರ ವಚನಗಳು

“ಭಕ್ತ ಕುಂಬಾರ”ದ ಹುಣಸೂರರು