Posts

Showing posts with the label Responsibility of a Kannadiga

ಕನ್ನಡಿಗನ ಆದ್ಯ ಕರ್ತವ್ಯಗಳು

ಕನ್ನಡಿಗರಾದ ನಾವು ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಲು ನಮ್ಮ ಪರಿಸರದಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ವೈಯಕ್ತಿಕವಾಗಿ ಮಾಡಬಹುದಾದ(ಮಾಡಲೇಬೇಕಾದ) ಕೆಲವು ಕನ್ನಡ ಪರ ಕೆಲಸಗಳ ಪಟ್ಟಿ. ಈ ಕೆಲಸಗಳನ್ನು ಮಾಡಲು ಯಾವ ಸಂಘಟನೆಯೂ ಬೇಕಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ಮನಸ್ಸು ಮಾಡಿದರೆ ಸುಲಭವಾಗಿ ಮಾಡಬಹುದು. ೧. ತಮ್ಮ ಸ್ನೇಹಿತರ ಜೊತೆ, ಸಾರ್ವಜನಿಕರ ಜೊತೆ ಅವರು ಯಾವುದೇ ಭಾಷಿಕರಾಗಿರಲಿ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವುದು. ಟಿಪ್ಪಣಿ: ಬ್ಯಾಂಕುಗಳಲ್ಲಿ ವ್ಯವಹರಿಸುವಾಗ(ಚೆಕ್ಕು, ಚಲನ್‌ಗಳನ್ನು ಕನ್ನಡದಲ್ಲೇ ಬರೆಯಿರಿ), ಬಸ್ಸು/ರೈಲುಗಳ ಖಾದಿರುಸುವಿಕೆ ಮಾಡುವಾಗ, ಸಾರ್ವಜನಿಕವಾಗಿ ಕರ್ನಾಟಕದಲ್ಲಿ ಎಲ್ಲೇ ವ್ಯವಹಾರ ಮಾಡುವಾಗ ಕನ್ನಡ ಬರವಣಿಗೆ ಉಪಯೋಗಿಸಿ, ಸಿಬ್ಬಂದಿಗಳ ಜೊತೆ ಕನ್ನಡದಲ್ಲೇ ಮಾತನಾಡಿ. ಯಾರೇ ಮನೆಗೆ ದೂರವಾಣಿ ಕರೆ/ಸಂಚಾರಿ(ಮೋಬೈಲ್) ಕರೆ ಮಾಡಿದರೂ ಕನ್ನಡದಲ್ಲೇ ಮಾತನಾಡಿ. ಹೀಗೆ ಪರಭಾಷಿಕರು ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಮಾಡಿ. ೨. ತಮ್ಮ ಮನೆಯಲ್ಲಿ ಕನ್ನಡದ ಒಂದು ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳನ್ನು ಕೊಂಡು ಓದುವುದು ಟಿಪ್ಪಣಿ: ಬಹುಪಾಲು ಕನ್ನಡಿಗರ ಮನೆಗಳಲ್ಲಿ, ಅದರಲ್ಲೂ ಪಟ್ಟಣ ಪ್ರದೇಶಗಳಲ್ಲಿ ಆಂಗ್ಲ ಪತ್ರಿಕೆಗಳನ್ನು ತರಿಸುತ್ತಾರೆ. ಇದರಿಂದ ಕನ್ನಡದ ಸುದ್ದಿಗಳು ಕನ್ನಡಿಗರಿಗೆ ತಿಳಿಯುವುದಿಲ್ಲ, ಏಕೆಂದರೆ ಕನ್ನಡ ಪರ ಸುದ್ದಿಗಳು ಆಂಗ್ಲ ಪತ್ರಿಕೆಗಳಲ್ಲಿ ಬರುವುದಿಲ್ಲ. ಈಗಾಗಲೆ ಆಂ...