ಹಿಂದುತ್ವ - ಒಂದು ಮಂಥನ
ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ಒಂದು ವಿಚಾರಮಂಥನ. ಮೊದಲಿಗೆ ಈ ಹಿಂದೂ ಶಬ್ದದ ಬಗ್ಗೆ ವಿಚಾರ ಮಾಡೋಣ. ನಮ್ಮ ವೇದ, ಪುರಾಣ, ಶಾಸ್ತ್ರಗಳಲ್ಲಿ ಎಲ್ಲಿಯೂ ಈ ಹಿಂದೂ ಶಬ್ದದ ಉಲ್ಲೇಖವಿಲ್ಲ. ಹಿಂದೂ ಎನ್ನುವ ಶಬ್ದದ ಮೂಲ ಸಿಂಧು ಎಂದು ಇತಿಹಾಸಕಾರರ ಅಭಿಪ್ರಾಯ. ಮಧ್ಯಏಷಿಯಾದಿಂದ ಭಾರತದ ಮೇಲೆ ದಂಡೆತ್ತಿ ಬಂದ ಪರ್ಷಿಯನ್ನರು, ಸಿಂಧು ನದಿಯನ್ನು ಹಿಂದು ಎಂದರು ಮತ್ತು ಆಗ ಸಿಂಧು ನದಿಯಾಚೆ(ಈಗ ಪಾಕಿಸ್ತಾನದಲ್ಲಿ ಇರುವ ಸಿಂಧು ನದಿ ಪ್ರದೇಶ) ನೆಲೆಸಿದವರನ್ನು ಹಿಂದೂ ಎಂದು ಕರೆದರು. ಅಂದರೆ ಈ ಹಿಂದೂ ಪದ ನಮ್ಮದಲ್ಲ. ಸಿಂಧು ನದಿ ತೀರ ಮತ್ತು ಗಂಗಾ ನದಿ ತೀರದಲ್ಲಿ ಹರಡಿಕೊಂಡಿದ್ದ ವೈದಿಕ ಧರ್ಮವನ್ನು ಆಚರಿಸುತ್ತಿದ್ದ ಜನರನ್ನು, ವಿದೇಶಿ ಆಕ್ರಮಣಕಾರರು ಹಿಂದೂ ಎಂದು ಸಂಬೋಧಿಸಿರುವುದನ್ನು ನಾವು ಒಪ್ಪಿಕೊಂಡು, ನಮ್ಮನ್ನು ನಾವು ಹಿಂದೂಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ವಿಪರ್ಯಾಸವೆನಿಸುತ್ತದೆ. ನಾವೇನು ಹಿಂದೂ ಧರ್ಮ ಎನ್ನುತ್ತೇವೆಯೋ ಅದು ನಿಜವಾಗಿ ಹೇಳಬೇಕೆಂದರೆ ಸನಾತನ ಧರ್ಮ ಅಥವಾ ವೈದಿಕ ಧರ್ಮವೇ ಆಗಿದೆ. ಅದೇನೇ ಇರಲಿ ಇಂದು ನಾವು ಹಿಂದೂ ಪದವನ್ನು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಒಪ್ಪಿಕೊಂಡುಬಿಟ್ಟಿದ್ದೇವೆ. ಇದಕ್ಕೆ ಅಪವಾದವೊಂದಿದೆ. ಕನ್ನಡನಾಡಿನ ಹೆಮ್ಮೆಯ ಮಾನವತಾವಾದಿ ಮತ್ತು ಯುಗಪುರುಷರಾದ ಶ್ರೀ ಬಸವಣ್ಣನವರು ವೈದಿಕ ಧರ್ಮವನ್ನು ಧಿಕ್ಕರಿಸಿ ಲಿಂಗಾಯಿತ ಧರ್ಮವನ್ನು ಸ್ಥಾಪಿಸಿದರು. ಆದ್ದರಿಂದ ಲಿಂಗಾಯಿತ ಧರ್ಮ ಹಿಂದೂ ಧರ