Posts

Showing posts with the label Melukote

ಚೆಲುವಯ್ಯನ ಮೇಲುಕೋಟೆ

ಮೇಲುಕೋಟೆ ಎಂದಾಕ್ಷಣ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಕಣ್ಣುತುಂಬಿ ಕೊಳ್ಳುತ್ತದೆ. ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಕರ್ನಾಟಕದ ದಕ್ಷಿಣದ ಪ್ರದೇಶದ ಅತ್ಯಂತ ಜನಪ್ರಿಯ ಉತ್ಸವ/ಜಾತ್ರೆಗಳಲ್ಲಿ ಒಂದಾಗಿದೆ. ಈ ವೈರಮುಡಿ ಉತ್ಸವಕ್ಕೆ ಕರ್ನಾಟಕದ ಸಾವಿರಾರು ಭಕ್ತರ ಜೊತೆಗೆ ತಮಿಳುನಾಡು ಮತ್ತು ಆಂದ್ರಪ್ರದೇಶದಿಂದಲೂ ಭಕ್ತರು ಬಂದು ಪಾಲ್ಗೊಳ್ಳುವುದು ವಿಶೇಷ. ಮೇಲುಕೋಟೆ ಭವ್ಯ ಪುರಾಣೇತಿಹಾಸವನ್ನು ಹೊಂದಿರುವ ಸ್ಥಳ. ಕೃತಯುಗುದಲ್ಲಿ ಇಲ್ಲಿಯೇ ದತ್ತಾತ್ರೇಯಸ್ವಾಮಿಯು ವೇದಗಳನ್ನು ಉಪದೇಶಿಸಿದ್ದರಿಂದ ಇದಕ್ಕೆ ವೇದಾದ್ರಿಯೆಂದೂ ಹೆಸರು. ತ್ರೇತಾಯುಗದಲ್ಲಿ ಇದು ನಾರಾಯಣಾದ್ರಿಯಾಗಿತ್ತು. ಬ್ರಹ್ಮನು ತನ್ನ ನಿತ್ಯಪೂಜೆಗಾಗಿ ನಾರಾಯಣನ ಅರ್ಚಾವಿಗ್ರಹ ಬೇಕೆಂದು ಕೋರಲು ವಿಷ್ಣುವು ನಾರಾಯಣನ ಸುಂದರ ಮೂರ್ತಿಯನ್ನು ಬ್ರಹ್ಮನಿಗೆ ನೀಡಿದನು. ಅದೇ ಮೂರ್ತಿಯನ್ನು ತನ್ನ ಮಾನಸಪುತ್ರರದ ಸನತ್ಕುಮಾರರಿಗೆ ಅವರ ಭೂಲೋಕ ಯಾತ್ರೆಯ ಸಮಯದಲ್ಲಿ ಪೂಜೆಗೆಂದು ಬ್ರಹ್ಮನು ಕೊಟ್ಟನು. ಸನತ್ಕುಮಾರರು ಆ ಸುಂದರವಾದ ನಾರಾಯಣ ಮೂರ್ತಿಯನ್ನು ಇಂದಿನ ಮೇಲುಕೋಟೆಯಲ್ಲಿ ಪ್ರತಿಷ್ಠಾಪಿಸಿದರು. ಆದ್ದರಿಂದ ಈ ಕ್ಷೇತ್ರಕ್ಕೆ ನಾರಾಯಣಾದ್ರಿಯೆಂದೂ ಹೆಸಾರಾಯಿತು. ಮೇಲುಕೋಟೆಯ ನಾರಾಯಣನ ಮೂಲ ಮೂರ್ತಿ ಅತಿಸುಂದರವಾಗಿದೆ. ಈ ಕಾರಣದಿಂದಲೇ ದೇವರನ್ನು ಚೆಲುವನಾರಾಯಣನೆಂದು ಕರೆಯುವುದು. ಚೆಲುವಯ್ಯನನ್ನು ನೋಡತ್ತಿದ್ದರೆ ನೋಡುತ್ತಲೇ ಇರಬೇಕೆನ್ನುವಷ...