Posts

Showing posts with the label K. S. Narayanacharaya

ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ವಿಶ್ಲೇಷಣೆಯಲ್ಲಿ ಮಹಾಭಾರತದ ಕರ್ಣ

ಶ್ರೀ ವೇದವ್ಯಾಸರು ರಚಿಸಿದ ಸಂಸ್ಕೃತ ಮಹಾಕಾವ್ಯವಾದ ಮಹಾಭಾರತ ೧ ಲಕ್ಷ ಶ್ಲೋಕಗಳ ಬೃಹತ್ ಕಾವ್ಯ. ಶ್ರೀ ವೇದವ್ಯಾಸರು ಮಹಾಭಾರತದ ಒಂದು ಪ್ರಮುಖ ಪಾತ್ರವೇ ಆಗಿದ್ದರು. ದೃತರಾಷ್ಟ್ರ, ಪಾಂಡು ಮತ್ತು ವಿಧುರರ ಜನನಕ್ಕೆ ಕಾರಣರಾಗಿ ಕುರುವಂಶವನ್ನು ಉದ್ಧರಿಸಿದವರು. ಕೌರವರು ಹಾಗೂ ಪಂಡವರ ನಡುವೆ ನಡೆದ ಕುರುಕ್ಷೇತ್ರ ಮಹಾಯುದ್ಧವನ್ನು ಕಣ್ಣಾರೆ ಕಂಡಿದ್ದವರು. ಇಂತಹ ವೇದವ್ಯಾಸರು ರಚಿಸಿದ ಮಹಾಭಾರತದಲ್ಲಿನ ಸತ್ಯ ಘಟನೆಗಳು, ನಿಜ ಪಾತ್ರಗಳು ಬೇರೇ ಬೇರೇ ಭಾಷೆಗಳಲ್ಲಿ ರಚಿಸಲ್ಪಟ್ಟ ಮಹಾಭಾರತದಲ್ಲಿ ಮೂಲ ಮಹಾಭಾರತಕ್ಕೆ ವಿರುದ್ಧವಾಗಿ ಬಹಳಷ್ಟು ಬದಲಾವಣೆಗಳನ್ನು ಪಡೆದು ಕೊಂಡಿವೆ. ಕನ್ನಡದಲ್ಲಿ ಹೀಗೆ ಮಹಾಭಾರತವನ್ನು ಆಧರಿಸಿ ರಚಿತವಾದ ಕಾವ್ಯಗಳಲ್ಲಿ ‘ಪಂಪ ಭಾರತ’ ಮತ್ತು ‘ಕುಮಾರವ್ಯಾಸ ಭಾರತ’ ಪ್ರಮುಖವಾದವುಗಳು. ಸಂಸ್ಕೃತ, ಕನ್ನಡ ವಿದ್ವಾಂಸರೂ ಹಾಗೂ ಪ್ರಸಿದ್ಧ ಪ್ರವಚನಕಾರರೂ ಆದ ಪ್ರೊ. ಕೆ.ಎಸ್ ನಾರಾಯಣಾಚಾರ್ಯರು ವಿಶ್ಲೇಷಿಸಿದಂತೆ ವೇದವ್ಯಾಸರ ದೃಷ್ಟಿಯಲ್ಲಿನ ಮಹಾಭಾರತದ ಕರ್ಣನ ಪಾತ್ರವನ್ನು ಈಗ ವಿವೇಚಿಸೋಣ. ನಮಗೆಲ್ಲ ತಿಳಿದಿರುವಂತೆ ನಾವು ಓದಿದ ಪಂಪ ಭಾರತವಿರಲಿ ಅಥವಾ ಕುಮಾರವ್ಯಾಸ ಭಾರತವೇ ಇರಲಿ ಎರಡರಲ್ಲೂ ಕರ್ಣನ ಪಾತ್ರವನ್ನು ಬಹಳ ವೈಭವೀಕರಿಸಿರುವುದನ್ನು ನಾವು ಕಾಣುತ್ತೇವೆ. ಪಂಪ, ಕುಮಾರವ್ಯಾಸರು ಕರ್ಣನನ್ನು ದಾನಶೂರ, ವೀರ ಎಂದು ಹೊಗಳಿದ್ದಾರೆ. ಅವನ ತಾಯಿ ಕುಂತಿ ಮಾಡಿದ ತಪ್ಪಿಗಾಗಿ ಜಿವನ ಪೂರ್ತಿ ಅವನು ಪರಿತಪಿಸುವಂತಾಯಿತು. ಅಂಗರಾಜ್ಯಕ...