Posts

Showing posts with the label Sampige

ಹೆಸರು ಪುರಾಣ

ಹೆಸರಿನಲ್ಲೇನಿದೆ? ಎಂದು ಬಹಳ ಜನ ಕೇಳುತ್ತಾರೆ. ಹೆಸರಿನಲ್ಲಿ ಏನೆಲ್ಲಾ ಇದೆ ಎಂದು ತಿಳಿದುಕೊಳ್ಳೋಣ ಬನ್ನಿ. ಹಿಂದೆ ಹೆಸರುಗಳು ವಿಭಿನ್ನವಾಗಿ, ಅರ್ಥಪೂರ್ಣವಾಗಿರುತಿದ್ದವು. ಇಂದಿನ ಜನರ ಹೆಸರುಗಳಲ್ಲಿ ಏನೂ ವಿಶೇಷವಿಲ್ಲ ಬಿಡಿ. ಗಂಡಾದರೆ ಸಾಮಾನ್ಯವಾಗಿ ವಿಷ್ಣು ಸಹಸ್ರನಾಮದಲ್ಲಿರುವ ಹೆಸರೋ, ಇಲ್ಲಾ ಶಿವ ಸಹಸ್ರನಾಮದಲ್ಲಿರುವ ಹೆಸರೋ ಅಥವಾ ಬೇರೆ ಗಂಡು ದೇವರುಗಳ ಹೆಸರೋ ಇರುತ್ತದೆ. ಹೆಣ್ಣಾದರೆ ಲಕ್ಷಿ, ಸರಸ್ವತಿ, ಪಾರ್ವತಿಯರ ಅಷ್ಟೋತ್ತರದಲ್ಲಿರುವ ಹೆಸರೋ ಅಥವಾ ನದಿಗಳ ಹೆಸರೋ ಇರುತ್ತದೆ. ಈಗೀಗ ಯಾರು ಇಟ್ಟಿರದ ಹೆಸರನ್ನಿಡಬೇಕೆಂದು ಋತುಗಳ ಹೆಸರುಗಳನ್ನು(ಗ್ರೀಷ್ಮ, ವಸಂತ, ಚೈತ್ರ ಇತ್ಯಾದಿ) ಹಾಗೂ ಜನ್ಮನಕ್ಷತ್ರಗಳ ಹೆಸರುಗಳನ್ನು ಮತ್ತು ತಮ್ಮ ಗೋತ್ರದ(ವಿಶ್ವಾಮಿತ್ರ, ಭಾರದ್ವಾಜ, ವಸಿಷ್ಠ ಇತ್ಯಾದಿ) ಹೆಸರನ್ನೂ ಇಡುತ್ತಿದ್ದಾರೆ. ಹಿಂದೆ ನಮ್ಮ ಪೂರ್ವಜರು ಹೆಸರಿಡುವಲ್ಲೂ, ತಮ್ಮ ಸೃಜನಶೀಲತೆಯನ್ನು, ಬುದ್ಧಿವಂತಿಕೆಯನ್ನು ಮೆರೆದಿದ್ದರು . ದ್ರೋಣ, ಪಾರ್ಥ(ಅರ್ಜುನ), ಕರ್ಣ, ಘಟೋತ್ಕಚ, ಸರ್ವಧಮನ(ಭರತ), ಬಬ್ರುವಾಹನ, ಪರೀಕ್ಷಿತ, ಕುಂತಿ, ಗಾಂಧಾರಿ ಮುಂತಾದವು ಒಂದೊಂದೂ ವಿಶಿಷ್ಟವಾದ ಅರ್ಥಪೂರ್ಣವಾದ ಹೆಸರುಗಳು ಅಲ್ಲವೇ ? ದ್ರೋಣ ಎಂದರೆ ಮಣ್ಣಿನ ಮಡಕೆ. ಮಡಕೆಯಲ್ಲಿ ಜನಿಸಿದ್ದಕ್ಕೆ ದ್ರೋಣ ಎಂದು ಹೆಸರಾಯಿತು. ಹಾಗೇ ಘಟೊತ್ಕಚನು ಹುಟ್ಟಿದಾಗ ಅವನ ತಲೆ ದೊಡ್ಡ ಘಟದ ಹಾಗಿತ್ತಂತೆ. ಅದಕ್ಕೆ ಅವನಿಗೆ ಘಟೊತ್ಕಚ ಎಂದು ಹೆಸರಿಟ್ಟರು. ಇನ್ನು ಪೃಥೆ...