ನಾವ್ಯಾಕೆ ಹೀಗೆ? ನಮ್ಮಲ್ಲಿ ನಾಗರಿಕ ಪ್ರಜ್ಞೆ ಮೂಡುವುದು ಯಾವಾಗ?
ಮಧ್ಯರಾತ್ರಿ ೧ ಗಂಟೆಯಾಗಿತ್ತು. ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದೆ. ಸ್ವಲ್ಪ ದೂರದಲ್ಲಿ ಟ್ರಾಫ಼ಿಕ್ ಸಿಗ್ನಲ್ ಕೆಂಪು ದೀಪ ತೊರಿಸುತ್ತಿತ್ತು. ಮುಂದೆ ಒಂದು ಕಾರು ಹಸಿರು ದೀಪಕ್ಕಾಗಿ ಕಾದು ನಿಂತಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ವಾಹನ ಸಂಚಾರ ಇಲ್ಲದಿದ್ದರೂ ಆ ಕಾರಿನ ಚಾಲಕ ಕೆಂಪುದೀಪವನ್ನು ಗೌರವಿಸಿ ವಾಹನವನ್ನು ನಿಲ್ಲಿಸಿದ್ದ! ಆ ಚಾಲಕನಿಗೆ ತಲೆ ಕೆಟ್ಟಿರಬೇಕು ಎಂದು ನೀವು ಚಿಂತಿಸುತ್ತಿರಬಹುದು ಅಲ್ಲವೇ? ಈ ಘಟನೆ ನಡೆದದ್ದು ಇಂಗ್ಲೆಂಡಿನ ಒಂದು ಪುಟ್ಟ ಊರಾದ ರೆಡ್ಡಿಂಗ್ ಎಂಬಲ್ಲಿ. ಖಂಡಿತ ಇದನ್ನು ನಾವು ಭಾರತದ ಮಹಾನಗರಗಳಲ್ಲಿ ಊಹಿಸಲೂ ಸಾಧ್ಯವಿಲ್ಲ. ಆ ಘಟನೆಯ ಬಗ್ಗೆ ಅಚ್ಚರಿ ಮತ್ತು ಪಾಶ್ಚಾತ್ಯ ದೇಶದವರ ನಾಗರಿಕ ಪ್ರಜ್ಞೆ (ಸಿವಿಕ್ ಸೆನ್ಸ್) ಬಗ್ಗೆ ಮೆಚ್ಚಿಗೆ ಮೂಡಿತು. ನಮ್ಮ ಭಾರತದಲ್ಲಿನ ಪರಿಸ್ಥಿತಿ ನೆನೆಸಿಕೊಂಡಾಗ ನಾವು ಭಾರತೀಯರು ಯಾಕೆ ಹೀಗೆ? ನಮ್ಮಲ್ಲಿ ನಾಗರಿಕ ಪ್ರಜ್ಞೆ ಮೂಡುವುದು ಯಾವಾಗ ಎಂದು ಚಿಂತಿಸತೊಡಗಿದೆ. ನಾವು ಭಾರತೀಯರು, ಅದರಲ್ಲೂ ಇಂದಿನ ವಿದ್ಯಾವಂತ ಯುವಜನಾಂಗ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನು ಅಪ್ಪಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹುಟ್ಟು ಹಬ್ಬ ಆಚರಿಸುವಾಗ ಪಾಶ್ಚಾತ್ಯರಂತೆ ಕೇಕ್ ಕತ್ತರಿಸಿ ಕೇಕೆ ಹಾಕುತ್ತೇವೆ, “ ಹ್ಯಾಪಿ ಬರ್ತ್‌ಡೇ ಟು ಯೂ ” ಎಂದು ಅವರ ಭಾಷೆಯಲ್ಲೇ ಶುಭಾಶಯ ಹೇಳುತ್ತೇವೆ, ಅವರ ವೇಷಭೂಷಣಗಳನ್ನು ಅನುಕರಿಸುತ್ತೇ...