Posts

Showing posts from 2010

ಜಾನಪದ ಗೀತೆಗಳಲ್ಲಿ ಕನ್ನಡನಾಡಿನ ದೇವರುಗಳು ಮತ್ತು ಪ್ರಕೃತಿ

ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ(ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ(ಬಯಲಾಟ, ದೊಡ್ಡಾಟ, ಶ್ರಿಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನi ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡದ ಜಾನಪದ ಸಂಸ್ಕೃತಿ೦ii ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಬದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿ೦ii ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರ...

ಕರ್ನಾಟಕ ಸಂಗೀತ - ಸಂಗೀತ ಲೋಕಕ್ಕೆ ಕನ್ನಡನಾಡಿನ ಹೆಮ್ಮೆಯ ಕೊಡುಗೆ

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ಶೈಲಿಯ ಸಂಗೀತ ಪ್ರಕಾರ ಅತ್ಯಂತ ಜನಪ್ರಿಯವಾಗಿರುವುದು ನಿಮಗೆಲ್ಲ ತಿಳಿದಿದೆ. ಪುರಾತನವಾದ ದಾಕ್ಷಿಣಾತ್ಯ ಸಂಗೀತ ಶೈಲಿಗೆ ಶ್ರೀ ಪುರಂದರದಾಸರು ಒಂದು ಮಹತ್ವಪೂರ್ಣವಾದ ಮಜಲನ್ನು ದೊರಕಿಸಿಕೊಟ್ಟರು. ಕಬ್ಬಿಣ್ಣದ ಕಡಲೆಯಂತಿದ್ದ ಈ ಸಂಗೀತವನ್ನು ಅಭ್ಯಸಿಸಲು ಸಾಮಾನ್ಯ ಜನರು ಬಹಳ ಕಷ್ಟಪಡುತ್ತಿದ್ದುದನ್ನು ಕಂಡ ಶ್ರೀ ಪುರಂದರದಾಸರು, ಈ ಸಂಗೀತವನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುವಂತೆ ಸಂಗೀತ ಲೋಕಕ್ಕೆ ವಿದ್ವತ್ಪೂರ್ಣ ಕೊಡುಗೆ ನೀಡಿದರು. ಪುರಂದರದಾಸರು ದಕ್ಷಿಣಾದಿ ಸಂಗೀತವನ್ನು ಕಲಿಯಲು ಒಂದು ವ್ಯವಸ್ಥಿತ ಪದ್ಧತಿಯನ್ನು ಅಳವಡಿಸಿದರು. ಖರಹರಪ್ರಿಯ ರಾಗದಿಂದ ಸಂಗೀತವನ್ನು ಅಭ್ಯಾಸಮಾಡಲು ಆರಂಭಿಸುತ್ತಿದ್ದ ಹಿಂದಿನ ಕ್ರಮವನ್ನು ಬದಲಾಯಿಸಿ ಸುಲಭ ಕಲಿಕೆಗೆ ಅನುವಾಗುವಂತೆ ಮಾಯಾಮಾಳವ ಗೌಳರಾಗದಲ್ಲಿ ಸರಳೆವರಸೆ, ಜಂಟಿವರಸೆ, ಅಲಂಕಾರಗಳನ್ನು ರಚಿಸಿದರು. ಮಲಹರಿರಾಗದಲ್ಲಿ ‘ ಲಂಬೋದರ ಲಕುಮಿಕರ.. ’ , ‘ ಕುಂದಗೌರ.. ’ , ‘ ಕೆರೆ೦ii ನೀರನು ಕೆರೆಗೆ ಚೆಲ್ಲಿ.. ’ , ಮತ್ತು ‘ ಪದುಮನಾಭ ಪರಮಪುರುಷ.. ’ ಎಂಬ ನಾಲ್ಕು ಪ್ರಸಿದ್ಧ ಪಿಳ್ಳಾರಿಗೀತೆಗಳನ್ನು ರಚಿಸಿದರು. ಪದಪದ್ಯಗಳು, ಉಗಾಭೋಗಗಳು, ಸುಳಾದಿಗಳು, ಕೃತಿಗಳು, ದೇವರನಾಮಗಳು, ಕೀರ್ತನೆಗಳೆಂಬ ವಿವಿಧ ಪ್ರಕಾರದ ಸಾಹಿತ್ಯವನ್ನು ಸಂಗೀತದ ಲಕ್ಷಣಗಳೊಂದಿಗೆ ಸಮೀಕರಿಸಿ ಸಂಸ್ಕೃತ ಭಾಷೆಯ ವೇದಪುರಾಣಗಳಲ್ಲಿನ ಧರ್ಮಶಾಸ್ತ್ರಗಳನ್ನು, ನೀತಿಯನ್ನು ಜನಸಾಮಾನ್ಯರಿಗ...

ಹಿಂದುತ್ವ - ಒಂದು ಮಂಥನ

ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ಒಂದು ವಿಚಾರಮಂಥನ. ಮೊದಲಿಗೆ ಈ ಹಿಂದೂ ಶಬ್ದದ ಬಗ್ಗೆ ವಿಚಾರ ಮಾಡೋಣ. ನಮ್ಮ ವೇದ, ಪುರಾಣ, ಶಾಸ್ತ್ರಗಳಲ್ಲಿ ಎಲ್ಲಿಯೂ ಈ ಹಿಂದೂ ಶಬ್ದದ ಉಲ್ಲೇಖವಿಲ್ಲ. ಹಿಂದೂ ಎನ್ನುವ ಶಬ್ದದ ಮೂಲ ಸಿಂಧು ಎಂದು ಇತಿಹಾಸಕಾರರ ಅಭಿಪ್ರಾಯ. ಮಧ್ಯ‌ಏಷಿಯಾದಿಂದ ಭಾರತದ ಮೇಲೆ ದಂಡೆತ್ತಿ ಬಂದ ಪರ್ಷಿಯನ್ನರು, ಸಿಂಧು ನದಿಯನ್ನು ಹಿಂದು ಎಂದರು ಮತ್ತು ಆಗ ಸಿಂಧು ನದಿಯಾಚೆ(ಈಗ ಪಾಕಿಸ್ತಾನದಲ್ಲಿ ಇರುವ ಸಿಂಧು ನದಿ ಪ್ರದೇಶ) ನೆಲೆಸಿದವರನ್ನು ಹಿಂದೂ ಎಂದು ಕರೆದರು. ಅಂದರೆ ಈ ಹಿಂದೂ ಪದ ನಮ್ಮದಲ್ಲ. ಸಿಂಧು ನದಿ ತೀರ ಮತ್ತು ಗಂಗಾ ನದಿ ತೀರದಲ್ಲಿ ಹರಡಿಕೊಂಡಿದ್ದ ವೈದಿಕ ಧರ್ಮವನ್ನು ಆಚರಿಸುತ್ತಿದ್ದ ಜನರನ್ನು, ವಿದೇಶಿ ಆಕ್ರಮಣಕಾರರು ಹಿಂದೂ ಎಂದು ಸಂಬೋಧಿಸಿರುವುದನ್ನು ನಾವು ಒಪ್ಪಿಕೊಂಡು, ನಮ್ಮನ್ನು ನಾವು ಹಿಂದೂಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ವಿಪರ್ಯಾಸವೆನಿಸುತ್ತದೆ. ನಾವೇನು ಹಿಂದೂ ಧರ್ಮ ಎನ್ನುತ್ತೇವೆಯೋ ಅದು ನಿಜವಾಗಿ ಹೇಳಬೇಕೆಂದರೆ ಸನಾತನ ಧರ್ಮ ಅಥವಾ ವೈದಿಕ ಧರ್ಮವೇ ಆಗಿದೆ. ಅದೇನೇ ಇರಲಿ ಇಂದು ನಾವು ಹಿಂದೂ ಪದವನ್ನು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಒಪ್ಪಿಕೊಂಡುಬಿಟ್ಟಿದ್ದೇವೆ. ಇದಕ್ಕೆ ಅಪವಾದವೊಂದಿದೆ. ಕನ್ನಡನಾಡಿನ ಹೆಮ್ಮೆಯ ಮಾನವತಾವಾದಿ ಮತ್ತು ಯುಗಪುರುಷರಾದ ಶ್ರೀ ಬಸವಣ್ಣನವರು ವೈದಿಕ ಧರ್ಮವನ್ನು ಧಿಕ್ಕರಿಸಿ ಲಿಂಗಾಯಿತ ಧರ್ಮವನ್ನು ಸ್ಥಾಪಿಸಿದರು. ಆದ್ದರಿಂದ ಲಿಂಗಾಯಿತ ಧರ್ಮ ಹಿಂದೂ ಧರ...

ನಾವ್ಯಾಕೆ ಹೀಗೆ? ನಮ್ಮಲ್ಲಿ ನಾಗರಿಕ ಪ್ರಜ್ಞೆ ಮೂಡುವುದು ಯಾವಾಗ?

ಮಧ್ಯರಾತ್ರಿ ೧ ಗಂಟೆಯಾಗಿತ್ತು. ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದೆ. ಸ್ವಲ್ಪ ದೂರದಲ್ಲಿ ಟ್ರಾಫ಼ಿಕ್ ಸಿಗ್ನಲ್ ಕೆಂಪು ದೀಪ ತೊರಿಸುತ್ತಿತ್ತು. ಮುಂದೆ ಒಂದು ಕಾರು ಹಸಿರು ದೀಪಕ್ಕಾಗಿ ಕಾದು ನಿಂತಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ವಾಹನ ಸಂಚಾರ ಇಲ್ಲದಿದ್ದರೂ ಆ ಕಾರಿನ ಚಾಲಕ ಕೆಂಪುದೀಪವನ್ನು ಗೌರವಿಸಿ ವಾಹನವನ್ನು ನಿಲ್ಲಿಸಿದ್ದ! ಆ ಚಾಲಕನಿಗೆ ತಲೆ ಕೆಟ್ಟಿರಬೇಕು ಎಂದು ನೀವು ಚಿಂತಿಸುತ್ತಿರಬಹುದು ಅಲ್ಲವೇ? ಈ ಘಟನೆ ನಡೆದದ್ದು ಇಂಗ್ಲೆಂಡಿನ ಒಂದು ಪುಟ್ಟ ಊರಾದ ರೆಡ್ಡಿಂಗ್ ಎಂಬಲ್ಲಿ. ಖಂಡಿತ ಇದನ್ನು ನಾವು ಭಾರತದ ಮಹಾನಗರಗಳಲ್ಲಿ ಊಹಿಸಲೂ ಸಾಧ್ಯವಿಲ್ಲ. ಆ ಘಟನೆಯ ಬಗ್ಗೆ ಅಚ್ಚರಿ ಮತ್ತು ಪಾಶ್ಚಾತ್ಯ ದೇಶದವರ ನಾಗರಿಕ ಪ್ರಜ್ಞೆ (ಸಿವಿಕ್ ಸೆನ್ಸ್) ಬಗ್ಗೆ ಮೆಚ್ಚಿಗೆ ಮೂಡಿತು. ನಮ್ಮ ಭಾರತದಲ್ಲಿನ ಪರಿಸ್ಥಿತಿ ನೆನೆಸಿಕೊಂಡಾಗ ನಾವು ಭಾರತೀಯರು ಯಾಕೆ ಹೀಗೆ? ನಮ್ಮಲ್ಲಿ ನಾಗರಿಕ ಪ್ರಜ್ಞೆ ಮೂಡುವುದು ಯಾವಾಗ ಎಂದು ಚಿಂತಿಸತೊಡಗಿದೆ. ನಾವು ಭಾರತೀಯರು, ಅದರಲ್ಲೂ ಇಂದಿನ ವಿದ್ಯಾವಂತ ಯುವಜನಾಂಗ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನು ಅಪ್ಪಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹುಟ್ಟು ಹಬ್ಬ ಆಚರಿಸುವಾಗ ಪಾಶ್ಚಾತ್ಯರಂತೆ ಕೇಕ್ ಕತ್ತರಿಸಿ ಕೇಕೆ ಹಾಕುತ್ತೇವೆ, “ ಹ್ಯಾಪಿ ಬರ್ತ್‌ಡೇ ಟು ಯೂ ” ಎಂದು ಅವರ ಭಾಷೆಯಲ್ಲೇ ಶುಭಾಶಯ ಹೇಳುತ್ತೇವೆ, ಅವರ ವೇಷಭೂಷಣಗಳನ್ನು ಅನುಕರಿಸುತ್ತೇ...

ಬೆಂಗಳೂರಿನ ಎಲ್ಲಾ ಪ್ರದೇಶಗಳಿಗೂ ಹೋಗಿ ಕನ್ನಡಿಗರು ನೆಲಸಬೇಕು...

ಮಹಾತ್ಮಗಾಂಧಿ ರಸ್ತೆಯಲ್ಲಿರುವ ಗಂಗಾರಾಮ್ ಪುಸ್ತಕದ ಅಂಗಡಿಯಲ್ಲಿ ಕನ್ನಡದ ಪುಸ್ತಕಗಳು, ಪತ್ರಿಕೆಗಳು ಸಿಗುತ್ತಿಲ್ಲವೆಂದು, ಇತ್ತೀಚೆಗೆ ಕನ್ನಡದ ಅಂತರ್ಜಾಲ ಗುಂಪಿನಲ್ಲೊಬ್ಬರು ಅಳಲು ತೋಡಿಕೊಂಡಿದ್ದರು. ಗಾಂಧಿನಗರದಲ್ಲಿರುವ ಸಪ್ನ ಪುಸ್ತಕದ ಅಂಗಡಿಯಲ್ಲಿ ಮತ್ತು ನವಕರ್ನಾಟಕ ಪ್ರಕಾಶನದ ಪುಸ್ತಕ ಅಂಗಡಿಗಳಲ್ಲಿ ಕನ್ನಡದ ಪುಸ್ತಕಗಳು ಹೆಚ್ಚಾಗಿ ಮಾರಾಟವಾಗುತ್ತವೆ. ಜಯನಗರದ ಪುಸ್ತಕದ ಅಂಗಡಿಗಳಾದ ಪ್ರಿಸ್ಮ್, ಬುಕ್‌ಪ್ಯಾರಡೈಸ್ ಮತ್ತು ಸಪ್ನ ಪುಸ್ತಕದ ಅಂಗಡಿಗಳಲ್ಲೂ ಕನ್ನಡ ಪುಸ್ತಕಗಳು ಸಿಗುತ್ತವೆ. ಬಸವನಗುಡಿಯ ಗಾಂಧೀಬಜಾರ್‌ನಲ್ಲಿರುವ ಅಂಕಿತ ಪುಸ್ತಕದ ಅಂಗಡಿಯಲ್ಲಂತೂ ಹೆಚ್ಚಾಗಿ ಕನ್ನಡ ಪುಸ್ತಕಗಳೇ ಮಾರಾಟವಾಗುತ್ತವೆ. ಆದರೆ ಮಹಾತ್ಮಗಾಂಧಿ ರಸ್ತೆಯ ಗಂಗಾರಮ್ಸ್‌ನಲ್ಲಾಗಲೀ, ಕೋರಮಂಗಲದ ಫ಼ೋರಮ್‌ನಲ್ಲಿರುವ ಲ್ಯಾಂಡ್‌ಮಾರ್ಕ್‌ನಲ್ಲಾಗಲೀ, ಅಥವಾ ದಂಡು ಪ್ರದೇಶದ ಪುಸ್ತಕದ ಅಂಗಡಿಗಳಲ್ಲಾಗಲೀ ಕನ್ನಡ ಪುಸ್ತಕಗಳನ್ನು ಕೊಳ್ಳಲು ಸಿಗುವುದು ಕಷ್ಟ. ಬರೀ ಪುಸ್ತಕಗಳಷ್ಟೇ ಅಲ್ಲ, ಕನ್ನಡ ಚಿತ್ರಗೀತೆಗಳ, ಭಾವಗೀತೆಗಳ ದ್ವನಿಸುರುಳಿಗಳು, ಸಿ.ಡಿಗಳೂ ಇಲ್ಲಿನ ಅಂಗಡಿಗಳಲ್ಲಿ ಸಿಗುವುದು ಕಷ್ಟ. ಯಾಕೆ ಹೀಗೆ? ಮೊದಲಿಗೆ ಮೂಲ ಸಮಸ್ಯೆಯ ಬಗ್ಗೆ ಚಿಂತಿಸೋಣ. ಒಬ್ಬ ವ್ಯಾಪಾರಿ ತನ್ನ ಅಂಗಡಿಯಲ್ಲಿ, ಹೆಚ್ಚಾಗಿ ಮಾರಾಟವಾಗುವಂತಹ ವಸ್ತುಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿರುತ್ತಾನೆ. ಯಾವುದನ್ನು ಜನರು ಕೊಂಡುಕೊಳ್ಳುವುದಿಲ್ಲವೋ ಅಂತಹ ವಸ್ತುಗಳನ್ನು ತಂದು ವ್ಯಾಪರಿ ತನ್ನ...