Posts

Showing posts from March, 2012

ಕನ್ನಡ ಚಿತ್ರರಂಗಕ್ಕೆ ನಿಯಮಿತ ಡಬ್ಬಿಂಗ್ ನಿಂದ ಪ್ರಯೋಜನವಿದೆ - ಒಂದು ಅವಲೋಕನ

ಕನ್ನಡ ಚಿತ್ರರಂಗಕ್ಕೆ ನಿಯಮಿತ ಡಬ್ಬಿಂಗ್ ನಿಂದ ಪ್ರಯೋಜನವಿದೆ - ಒಂದು ಅವಲೋಕನ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಜಿ.ವಿ ಯವರು ಡಬ್ಬಿಂಗ್ ನಿಜವಾದ ಕಲೆಯಲ್ಲ, ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಅವಶ್ಯವಿಲ್ಲವೆಂದು ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಈಗ ನಿಯಮಿತ ಡಬ್ಬಿಂಗ್ ಯಾಕೆ ಬೇಕು ಎಂಬುದರ ಬಗ್ಗೆ ಒಂದು ಅವಲೋಕನ ಈ ಲೇಖನ. ಚಲನಚಿತ್ರ ಅಥವಾ ದಾರಾವಾಹಿಗಳನ್ನು ಮೂಲದ ಭಾಷೆಯಿಂದ ಮತ್ತೊಂದು ಭಾಷೆಗೆ, ಕಲಾವಿದರ ದ್ವನಿಯನ್ನು ಮರುಮುದ್ರಿಸುವುದನ್ನು ಡಬ್ಬಿಂಗ್ ಎಂದು ಕರೆಯುವುದು ವಾಡಿಕೆ. ಈ ಪ್ರಕ್ರಿಯೆಯಲ್ಲಿ ಮೂಲ ಕಲಾವಿದರ ಕಂಠದಲ್ಲೇ ಡಬ್ಬಿಂಗ್ ಮಾಡಬಹುದು ಅಥವಾ ಮೂಲ ಕಲಾವಿದರಿಗೆ ಡಬ್ಬಿಂಗ್ ಮಾಡುತ್ತಿರುವ ಭಾಷೆಯಲ್ಲಿ ಕುಶಲತೆ ಇಲ್ಲದಿದ್ದರೆ ಅಂತಹ ಕಲಾವಿದರಿಗೆ ಕಂಠದಾನ ಕಲಾವಿದರ ದ್ವನಿಯನ್ನು ಡಬ್ ಮಾಡಬಹುದು. ಈ ರೀತಿ ಒಂದು ಭಾಷೆಯಲ್ಲಿ ತಯಾರಿಸಿದ ಚಲನಚಿತ್ರಗಳನ್ನು, ದಾರಾವಾಹಿಗಳನ್ನು ಮತ್ತೊಂದು ಭಾಷೆಗೆ ಸುಲಭವಾಗಿ ಡಬ್ ಮಾಡಬಹುದು. ಕನ್ನಡ ಚಿತ್ರರಂಗ ಮತ್ತು ಡಬ್ಬಿಂಗ್ ಇತಿಹಾಸ ಕನ್ನಡ ಚಿತ್ರರಂಗದ ಪ್ರಾರಂಭದ ದಿನಗಳು ಡಬ್ಬಿಂಗ ಚಿತ್ರಗಳ ಕಾಲ ಎಂದರೆ ತಪ್ಪಲ್ಲ. ೪ಂ-೫೦ರ ದಶಕದಲ್ಲಿ, ಜನಪ್ರಿಯವಾದ ತಮಿಳು ಹಾಗೂ ತೆಲುಗು ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಕರ್ನಾಟಕದಲ್ಲಿ ಪ್ರದರ್ಶಿಸುತ್ತಿದ್ದರು. ಆಗಿನ್ನೂ ಕನ್ನಡ ಚಿತ್ರರಂಗಕ್ಕೆ ಕರ್ನಾಟಕದಲ್ಲಿ ಒಂದು ಸ್ವಂ