Posts

Showing posts from 2011

ಕನ್ನಡ ನಾಡಿನ ಸೌಂದರ್ಯ - ಸಂಗೀತ ದೃಶ್ಯಾವಳಿ

Image

ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕೆಲವು ಪತ್ರಗಳು

Image

ಬ್ಯಾಂಗಲೋರ್ ಬೆಂಗಳೂರು ಎಂದು ಬೇಗ ಆಗಲಿ

Image

ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಮತ್ತು ಕನ್ನಡದ ಸಮಸ್ಯೆಗಳು - ಒಂದು ವಿಶ್ಲೇಷಣೆ

Image
ಕನ್ನಡಿಗರು ಅದರಲ್ಲೂ ಬೆಂಗಳೂರು, ಮೈಸೂರು ಕಡೆಯವರು ಬಲು ಸೋಮಾರಿಗಳು. ಮನೆ ಕಟ್ಟುವ ಕೂಲಿ ಕೆಲಸ, ಕಾರ್ಪೆಂಟರ್, ಪ್ಲಂಬಿಂಗ್, ತರಕಾರಿ ಮಾರುವ ಕೆಲಸ, ಮನೆಗೆಲಸ ಮತ್ತು ನಗರಪಾಲಿಕೆಯ ಪೌರಕಾಮಿಕರ ಕೆಲಸ ಮುಂತಾದ ಯಾವುದೇ ಶ್ರಮದ ಕೆಲಸಗಳಿಗೆ ಅವರು ಮುಂದೆ ಬರುವುದಿಲ್ಲ ಎಂದು ಕನ್ನಡಿಗರೇ ಗೊಣಗುವುದನ್ನು ನಾವು ಬಹಳ ಸಲ ಕೇಳಿದ್ದೇವೆ. ತಮಿಳರು, ತೆಲುಗರು, ಮಲಯಾಳಿಗಳು, ಮತ್ತು ಈಗೀಗ ಉತ್ತರಭಾರತೀಯರು ಈ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ. ಇಂತಹ ಕೆಲಸಗಳಿಗೆ ಕನ್ನಡಿಗರನ್ನು ಹುಡುಕಿದರೂ ಸಿಗದಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಯಾಕೆ ಹೀಗೆ? ನಮ್ಮ ಕನ್ನಡಿಗರು ಈ ಕೆಲಸಗಳಿಗೆ ಒಗ್ಗುವುದಿಲ್ಲವೇ? ನಿಜವಾಗಿಯೂ ಸೋಮಾರಿಗಳೇ? ಇದರ ಬಗ್ಗೆ ನಾನು ಬಹಳಷ್ಟು ವಿಚಾರಮಾಡಿದ್ದೇನೆ. ಬಹಳ ಜನರು ಗಮನಹರಿಸದ ಬಹುಮುಖ್ಯ ಸಂಗತಿ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬುದು ಈ ಲೇಖನ ಬರೆಯಲು ಶುರುಮಾಡಿದೆ. (ಚಿತ್ರ ೧.) ವಿವಿಧ ರಾಜ್ಯಗಳ ಜನಗಣತಿಯ ಅಂಕಿ‌ಅಂಶಗಳು ಮೇಲ್ಕಂಡ ಚಿತ್ರ ೧ ರಲ್ಲಿನ ಭಾರತದ ವಿವಿಧ ರಾಜ್ಯಗಳ ನಕ್ಷೆಗಳನ್ನು ಮತ್ತು ಮೇಲಿನ ಜನಗಣತಿಯ ಅಂಕಿ‌ಅಂಶಗಳನ್ನು ಗಮನಿಸಿದರೆ ಕೆಲವು ಸತ್ಯ ಸಂಗತಿಗಳು ನಮಗೆ ಗೋಚರಿಸುತ್ತವೆ. ವಿಸ್ತಾರದಲ್ಲಿ ಕರ್ನಾಟಕ ರಾಜ್ಯಕ್ಕಿಂತ ಚಿಕ್ಕದಾಗಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಜನದಟ್ಟನೆ ನಮ್ಮ ರಾಜ್ಯಕ್

ಕನ್ನಡಿಗನ ಆದ್ಯ ಕರ್ತವ್ಯಗಳು

ಕನ್ನಡಿಗರಾದ ನಾವು ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಲು ನಮ್ಮ ಪರಿಸರದಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ವೈಯಕ್ತಿಕವಾಗಿ ಮಾಡಬಹುದಾದ(ಮಾಡಲೇಬೇಕಾದ) ಕೆಲವು ಕನ್ನಡ ಪರ ಕೆಲಸಗಳ ಪಟ್ಟಿ. ಈ ಕೆಲಸಗಳನ್ನು ಮಾಡಲು ಯಾವ ಸಂಘಟನೆಯೂ ಬೇಕಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ಮನಸ್ಸು ಮಾಡಿದರೆ ಸುಲಭವಾಗಿ ಮಾಡಬಹುದು. ೧. ತಮ್ಮ ಸ್ನೇಹಿತರ ಜೊತೆ, ಸಾರ್ವಜನಿಕರ ಜೊತೆ ಅವರು ಯಾವುದೇ ಭಾಷಿಕರಾಗಿರಲಿ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವುದು. ಟಿಪ್ಪಣಿ: ಬ್ಯಾಂಕುಗಳಲ್ಲಿ ವ್ಯವಹರಿಸುವಾಗ(ಚೆಕ್ಕು, ಚಲನ್‌ಗಳನ್ನು ಕನ್ನಡದಲ್ಲೇ ಬರೆಯಿರಿ), ಬಸ್ಸು/ರೈಲುಗಳ ಖಾದಿರುಸುವಿಕೆ ಮಾಡುವಾಗ, ಸಾರ್ವಜನಿಕವಾಗಿ ಕರ್ನಾಟಕದಲ್ಲಿ ಎಲ್ಲೇ ವ್ಯವಹಾರ ಮಾಡುವಾಗ ಕನ್ನಡ ಬರವಣಿಗೆ ಉಪಯೋಗಿಸಿ, ಸಿಬ್ಬಂದಿಗಳ ಜೊತೆ ಕನ್ನಡದಲ್ಲೇ ಮಾತನಾಡಿ. ಯಾರೇ ಮನೆಗೆ ದೂರವಾಣಿ ಕರೆ/ಸಂಚಾರಿ(ಮೋಬೈಲ್) ಕರೆ ಮಾಡಿದರೂ ಕನ್ನಡದಲ್ಲೇ ಮಾತನಾಡಿ. ಹೀಗೆ ಪರಭಾಷಿಕರು ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಮಾಡಿ. ೨. ತಮ್ಮ ಮನೆಯಲ್ಲಿ ಕನ್ನಡದ ಒಂದು ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳನ್ನು ಕೊಂಡು ಓದುವುದು ಟಿಪ್ಪಣಿ: ಬಹುಪಾಲು ಕನ್ನಡಿಗರ ಮನೆಗಳಲ್ಲಿ, ಅದರಲ್ಲೂ ಪಟ್ಟಣ ಪ್ರದೇಶಗಳಲ್ಲಿ ಆಂಗ್ಲ ಪತ್ರಿಕೆಗಳನ್ನು ತರಿಸುತ್ತಾರೆ. ಇದರಿಂದ ಕನ್ನಡದ ಸುದ್ದಿಗಳು ಕನ್ನಡಿಗರಿಗೆ ತಿಳಿಯುವುದಿಲ್ಲ, ಏಕೆಂದರೆ ಕನ್ನಡ ಪರ ಸುದ್ದಿಗಳು ಆಂಗ್ಲ ಪತ್ರಿಕೆಗಳಲ್ಲಿ ಬರುವುದಿಲ್ಲ. ಈಗಾಗಲೆ ಆಂ

ಕರ್ನಾಟಕದಲ್ಲಿ ಪ್ರವಾಸೋದ್ಯಮ

ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಪ್ರವಾಸೋದ್ಯಮವನ್ನು ಇಂದು ಒಂದು ಮುಖ್ಯ ಉದ್ಯಮವಾಗಿ ಗುರುತಿಸಲ್ಪಟ್ಟಿದೆ. ಅಂತರಾಷ್ಟ್ರೀಯ ಪ್ರವಾಸೋದ್ಯಮ ವಿಶ್ವದಲ್ಲೇ ಅತಿಹೆಚ್ಚು ವಿದೇಶಿ ವಿನಿಮಯಗಳಿಸುವ ಉದ್ಯಮವಾಗಿದೆ. ಇದರ ಜೊತೆಗೆ ಬಹಳಷ್ಟು ರಾಷ್ಟ್ರಗಳಲ್ಲಿ ಪ್ರವಾಸೋದ್ಯಮವು ಹೆಚ್ಚು ಉದ್ಯೋಗ ಸೃಷ್ಟಿಸುವ ಒಂದು ಉದ್ಯಮವಾಗಿ ಬೆಳೆದಿದೆ. ಪ್ರವಾಸೊದ್ಯಮವು ಒಂದು ಪ್ರದೇಶದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಹಾಗು ಅಲ್ಲಿನ ಜನರ ಜೀವನ ಸ್ಥಿತಿ ಉತ್ತಮಗೊಳಿಸುವಲ್ಲಿ ನೆರವಾಗುತ್ತದೆ. ಪ್ರವಾಸೋದ್ಯಮದಿಂದ ಸ್ಥಳೀಯ ಜನರಿಗೆ ಕೆಲಸ ಸಿಗುವುದರಿಂದ ಗ್ರಾಮಾಂತರ ಪ್ರದೇಶದಿಂದ ನಗರಕ್ಕೆ ಉದ್ಯೋಗಕ್ಕಾಗಿ ವಲಸೆ ಹೋಗುವುದು ಕಡಿಮೆಯಾಗುತ್ತದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಶೀಲ ದೇಶಗಳು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸುವ ಮೂಲಕ ಬಡತನದ ಸಮಸ್ಯೆಯನ್ನು ನಿರ್ಮೂಲನೆ ಮಾಡಬಹುದು ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ (WTO) ತಿಳಿಸುತ್ತದೆ. ಭಾರತದಲ್ಲಿ ಕೆಲವೇ ಕೆಲವು ರಾಜ್ಯಗಳು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿವೆ. ಆದರಲ್ಲಿ ಮುಖ್ಯವಾಗಿ ಗೋವಾ, ಕೇರಳ, ಹಿಮಾಚಲ ಪ್ರದೇಶ, ರಾಜಾಸ್ತಾನ ಮತ್ತು ತಮಿಳುನಾಡು ರಾಜ್ಯಗಳನ್ನು ಹೆಸರಿಸಬಹುದು. ಈ ರಾಜ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಹಾಗು ಜಾಗತಿಕ ಪ್ರವಾಸಿಗರಿಗೆ ಮಾಹಿತಿ ನೀಡುವಲ್ಲಿ ರಾಜ್ಯ ಸರ್ಕಾರಗಳು ಗಮನಹರಿಸಿ ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವ

ಕನ್ನಡ ನಾಡಿನ ಐತಿಹಾಸಿಕ ವಿಸ್ತಾರ

ಕಾವೇರಿಯಿಂದಮಾ ಗೋದಾವರಿ ವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಲಯ ವಿಲೀನ ವಿಶದ ವಿಷಯ ವಿಶೇಷಂ|| ಕನ್ನಡದಲ್ಲಿ ಈಗ ಲಭ್ಯವಿರುವ ಮೊದಲ ಗ್ರಂಥವಾದ “ಕವಿರಾಜಮಾರ್ಗ” ದಲ್ಲಿನ ಈ ನುಡಿಗಳು ಕನ್ನಡ ನಾಡಿನ ಐತಿಹಾಸಿಕ ವಿಸ್ತಾರವನ್ನು ಸ್ಥೂಲವಾಗಿ ತಿಳಿಸುತ್ತದೆ. ಕನ್ನಡ ಭಾಷಿಕರು ನೆಲೆಸಿದ ಪ್ರದೇಶ, ದಕ್ಷಿಣದ ಕಾವೇರಿ ನದಿಯಿಂದ ಉತ್ತರದ ಗೋದಾವರಿ ನದಿಯವರೆಗೆ ವ್ಯಾಪಿಸಿತ್ತು ಎಂದು ಇದರಿಂದ ತಿಳಿದುಬರುತ್ತದೆ. ಅಂದರೆ ಕಾವೇರಿಯ ದಕ್ಷಿಣಕ್ಕೆ ಹಾಗೂ ಗೋದಾವರಿಯ ಉತ್ತರಕ್ಕೆ ಕನ್ನಡ ಪ್ರದೇಶಗಳು ಇರಲಿಲ್ಲವೆಂದಲ್ಲ. ಮೊದಲು ನಾವು ದಕ್ಷಿಣದ ಕನ್ನಡ ಪ್ರದೇಶಗಳ ಕಡೆಗೆ ಗಮನಹರಿಸೋಣ ಬನ್ನಿ. ಈಗ ತಮಿಳುನಾಡು ರಾಜ್ಯದಲ್ಲಿ ಸೇರಿಹೋಗಿರುವ ಈರೋಡು, ಕೃಷ್ಣಗಿರಿ, ಧರ್ಮಪುರಿ ಹಾಗೂ ಸೇಲಂ ಜಿಲ್ಲೆಗಳು ಐತಿಹಾಸಿಕವಾಗಿ ಅಚ್ಚ ಕನ್ನಡ ಪ್ರದೇಶಗಳಾಗಿದ್ದವು. ತಲಕಾಡಿನ ಗಂಗರು ಹಾಗೂ ಬಾಣರಸರು ಈ ಪ್ರದೇಶಗಳನ್ನು ಆಳಿದ ಕನ್ನಡ ರಾಜಮನೆತನಗಳು. ಈ ಜಿಲ್ಲೆಗಳಲ್ಲಿ ದೊರಕಿರುವ ಹೆಚ್ಚಿನ ಶಾಸನಗಳು ತಲಕಾಡಿನ ಗಂಗರಸರ ಕನ್ನಡ ಶಾಸನಗಳು. ಈ ಭಾಗದ ಹಳ್ಳಿಗಳು, ಪಟ್ಟಣಗಳು ಈಗಲೂ ಕನ್ನಡದ ಹೆಸರನ್ನು ಹೊಂದಿವೆ. ಉದಾಹರಣೆಗೆ ಬೆಂಗಳೂರು ಗಡಿಗೆ ಹೊಂದಿಕೊಂಡಿರುವ ಹೊಸೂರು, ಡೆಂಕಣಿಕೋಟೆ ಊರುಗಳ ಹೆಸರು ಕನ್ನಡದಲ್ಲಿವೆ. ಈಗಲೂ ಕೃಷ್ಣಗಿರಿ ಬಳಿ ಕನ್ನಡ ಹಳ್ಳಿ ಎಂದು ಹೆಸರಿರುವ ಒಂದು ಹಳ್ಳಿಯಿದೆ! ಧರ್ಮಪುರಿ ಬಳಿಯಿರುವ ಕಾವೇರಿಯ ಜಲಪಾತದ ಹೆಸರು ಹೊಗೇನಕಲ್! ಕನ್ನಡ ಪದವಾ

ಚೆಲುವಯ್ಯನ ಮೇಲುಕೋಟೆ

ಮೇಲುಕೋಟೆ ಎಂದಾಕ್ಷಣ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಕಣ್ಣುತುಂಬಿ ಕೊಳ್ಳುತ್ತದೆ. ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಕರ್ನಾಟಕದ ದಕ್ಷಿಣದ ಪ್ರದೇಶದ ಅತ್ಯಂತ ಜನಪ್ರಿಯ ಉತ್ಸವ/ಜಾತ್ರೆಗಳಲ್ಲಿ ಒಂದಾಗಿದೆ. ಈ ವೈರಮುಡಿ ಉತ್ಸವಕ್ಕೆ ಕರ್ನಾಟಕದ ಸಾವಿರಾರು ಭಕ್ತರ ಜೊತೆಗೆ ತಮಿಳುನಾಡು ಮತ್ತು ಆಂದ್ರಪ್ರದೇಶದಿಂದಲೂ ಭಕ್ತರು ಬಂದು ಪಾಲ್ಗೊಳ್ಳುವುದು ವಿಶೇಷ. ಮೇಲುಕೋಟೆ ಭವ್ಯ ಪುರಾಣೇತಿಹಾಸವನ್ನು ಹೊಂದಿರುವ ಸ್ಥಳ. ಕೃತಯುಗುದಲ್ಲಿ ಇಲ್ಲಿಯೇ ದತ್ತಾತ್ರೇಯಸ್ವಾಮಿಯು ವೇದಗಳನ್ನು ಉಪದೇಶಿಸಿದ್ದರಿಂದ ಇದಕ್ಕೆ ವೇದಾದ್ರಿಯೆಂದೂ ಹೆಸರು. ತ್ರೇತಾಯುಗದಲ್ಲಿ ಇದು ನಾರಾಯಣಾದ್ರಿಯಾಗಿತ್ತು. ಬ್ರಹ್ಮನು ತನ್ನ ನಿತ್ಯಪೂಜೆಗಾಗಿ ನಾರಾಯಣನ ಅರ್ಚಾವಿಗ್ರಹ ಬೇಕೆಂದು ಕೋರಲು ವಿಷ್ಣುವು ನಾರಾಯಣನ ಸುಂದರ ಮೂರ್ತಿಯನ್ನು ಬ್ರಹ್ಮನಿಗೆ ನೀಡಿದನು. ಅದೇ ಮೂರ್ತಿಯನ್ನು ತನ್ನ ಮಾನಸಪುತ್ರರದ ಸನತ್ಕುಮಾರರಿಗೆ ಅವರ ಭೂಲೋಕ ಯಾತ್ರೆಯ ಸಮಯದಲ್ಲಿ ಪೂಜೆಗೆಂದು ಬ್ರಹ್ಮನು ಕೊಟ್ಟನು. ಸನತ್ಕುಮಾರರು ಆ ಸುಂದರವಾದ ನಾರಾಯಣ ಮೂರ್ತಿಯನ್ನು ಇಂದಿನ ಮೇಲುಕೋಟೆಯಲ್ಲಿ ಪ್ರತಿಷ್ಠಾಪಿಸಿದರು. ಆದ್ದರಿಂದ ಈ ಕ್ಷೇತ್ರಕ್ಕೆ ನಾರಾಯಣಾದ್ರಿಯೆಂದೂ ಹೆಸಾರಾಯಿತು. ಮೇಲುಕೋಟೆಯ ನಾರಾಯಣನ ಮೂಲ ಮೂರ್ತಿ ಅತಿಸುಂದರವಾಗಿದೆ. ಈ ಕಾರಣದಿಂದಲೇ ದೇವರನ್ನು ಚೆಲುವನಾರಾಯಣನೆಂದು ಕರೆಯುವುದು. ಚೆಲುವಯ್ಯನನ್ನು ನೋಡತ್ತಿದ್ದರೆ ನೋಡುತ್ತಲೇ ಇರಬೇಕೆನ್ನುವಷ

ಆಧ್ಯಾತ್ಮಿಕ ಚಿಂತನೆ

ಆಚಾರ್ಯ ಶ್ರೇಷ್ಠರಾದ ಶ್ರೀ ಶಂಕರರ ಮತ್ತು ಶ್ರೀ ರಾಮಾನುಜರ ಜಯಂತಿ ಸಾಮಾನ್ಯವಾಗಿ ಒಂದೇ ದಿನ ಬರುತ್ತದೆ. ಈ ಮಹಾನ್ ಆಚಾರ್ಯರ ನೆನಪಿನಲ್ಲಿ ಅವರುಗಳು ತೋರಿಸಿದ ಶ್ರೇಷ್ಠ ಆಧ್ಯಾತ್ಮಿಕ ದರ್ಶನಗಳ ಬಗ್ಗೆ ತಿಳಿಯೋಣ ಬನ್ನಿ. ಇಂದಿನ ಯಾಂತ್ರೀಕೃತ ಯುಗದಲ್ಲಿ ಯುವಕರಿಗೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜ್ಞಾನದ ಬಗ್ಗೆ ತಿಳಿದುಕೊಳ್ಳುವ ಸಮಯವಿರುವುದಿಲ್ಲ. ಅಂತಹವರಿಗೆ ನಮ್ಮ ಆಧ್ಯಾತ್ಮಿಕ ಚಿಂತೆನೆಗಳನ್ನು ಪರಿಚಯಿಸುವ ಸಲುವಾಗಿ ಈ ಬರಹ. ಓದುಗರು ಇದನ್ನು ಓದಿ ಆಧ್ಯಾತ್ಮಿಕ ಚಿಂತನೆಗಳಿಗೆ ತಮ್ಮ ಮನಸ್ಸನ್ನು ತೆರೆದುಕೊಳ್ಳಲೀ ಎಂಬುದೇ ಈ ಲೇಖನದ ಆಶಯ. ಅಧ್ಯಾತ್ಮ ಎಂದರೆ ನಮ್ಮೊಳಗಿರುವ ಆತ್ಮನಿಗೆ ಸಂಬಂಧಿಸಿದ ವಿಚಾರ. ಆಧ್ಯಾತ್ಮಿಕ ಜ್ಞಾನ( Spiritual Science) ಎಂದರೆ ತತ್ವಜ್ಞಾನ(Philosophy)ವೆಂದೂ ಅರ್ಥವಿದೆ. ಆತ್ಮತತ್ವ ಅಥವಾ ಬ್ರಹ್ಮತತ್ವಕ್ಕೆ ಸಂಬಂಧಿಸಿದ ಜ್ಞಾನ ಎಂದೂ ತಿಳಿದುಕೊಳ್ಳಬಹುದು. ಭಾರತೀಯ ಆಧ್ಯಾತ್ಮಿಕ ಚಿಂತನೆ ವಿಶ್ವದಲ್ಲೇ ಅತ್ಯುನ್ನತ ಸ್ಥಾನವನ್ನು, ಹಿರಿಮೆಯನ್ನು ಪಡೆದಿದೆ. ಭಾರತೀಯ ಆಧ್ಯಾತ್ಮಿಕ ಚಿಂತನೆ ಎಂದರೆ ಬಹುಪಾಲು ಅದು ವೇದಾಂತದ ಚಿಂತನೆಯೇ ಆಗಿದೆ. ವೇದಾಂತ(ಉಪನಿಷತ್ತು), ಬಾದರಾಯಣರ ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳ ಆಧಾರ ಅಥವಾ ಪ್ರಮಾಣದ ಮೇಲೇ ಭಾರತೀಯ ಆಧ್ಯಾತ್ಮಿಕ ಚಿಂತನೆ ನೆಲೆಗೊಂಡಿದೆ ಎಂದರೆ ತಪ್ಪಾಗಲಾರದು. ಈ ಆಧ್ಯಾತ್ಮಿಕ ಚಿಂತನೆ ಭಾರತದಲ್ಲಿ ಪುರಾತನಕಾಲದಿಂದಲೂ ನಡೆದ

ಜಯನಗರ - ಬೆಂಗಳೂರು ದಕ್ಷಿಣದ ಪ್ರತಿಷ್ಠಿತ ಬಡಾವಣೆ

ಮಾಗಡಿ ಕೆಂಪೇಗೌಡರು ಹಿಂದೆ ನಾಲ್ಕುದಿಕ್ಕಿನಲ್ಲಿ ಕಟ್ಟಿಸಿದ್ದ ನಾಲ್ಕುಗೋಪುರಗಳನ್ನೂ ದಾಟಿ ಬೆಂಗಳೂರು ನಗರ ಇಂದು ಬೃಹತ್ತಾಗಿ ಬೆಳೆದಿದೆ. ಹೀಗೆ ಕೆಂಪೇಗೌಡರು ಕಟ್ಟಿಸಿದ ಬೆಂಗಳೂರಿನ ದಕ್ಷಿಣದ ದಿಕ್ಕಿನ ಲಾಲ್‌ಭಾಗ್ ಉದ್ಯಾನವನದಲ್ಲಿರುವ ಗೋಪುರದ ಆಚೆ ಬೆಂಗಳೂರಿನ ಆಧುನಿಕ ಹಾಗೂ ಪ್ರತಿಷ್ಠಿತ ಬಡಾವಣೆಯಾದ ಜಯನಗರ ವ್ಯಾಪಿಸಿದೆ. ೧೯೪೮ರ ಆಗಸ್ಟನಲ್ಲಿ ಮೈಸೂರು ಸಂಸ್ಥಾನದ ಕೊನೆಯ ಅರಸರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ನೆನಪಿನಲ್ಲಿ ಜಯನಗರ ಬಡಾವಣೆ ಸ್ಥಾಪಿತವಾಯಿತು. ಈ ಬಡಾವಣೆಯನ್ನು ಆಗಿನ ಭಾರತದ ಗೊವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿಯವರು ಉದ್ಘಾಟಿಸಿದರು ಎಂಬುದು ಇತಿಹಾಸ. ಈ ಜಯನಗರ ಬಡಾವಣೆ ಏಷಿಯಾದಲ್ಲೇ ಅತ್ಯಂತ ದೊಡ್ಡದಾದ ಬಡಾವಣೆ ಎಂದು ಹೇಳುತ್ತಾರೆ. ಆದರೆ ಇದು ಇನ್ನೂ ಪ್ರಸ್ತುತವಾಗಿದೆಯೇ ತಿಳಿಯದು. ಆದರೂ ಜಯನಗರ ಬಡಾವಣೆಯ ವ್ಯಾಪ್ತಿ ನೋಡಿದರೆ ಇದು ಅತಿ ವಿಸ್ತಾರವಾದ ಪ್ರದೇಶ ಎಂಬುದರಿವಾಗುತ್ತದೆ. ಈ ಬಡಾವಣೆ ಕನಕನಪಾಳ್ಯ(೨ನೇ ವಿಭಾಗ), ಸಿದ್ಧಾಪುರ(೧ನೇ ವಿಭಾಗ), ಯೆಡಿಯೂರು(೬ನೇ ವಿಭಾಗ), ಪುಟ್ಟಯನಪಾಳ್ಯ(೯ನೇ ವಿಭಾಗ), ಬೈರಸಂದ್ರ(೧ನೇ ವಿಭಾಗ ಪೂರ್ವ), ಮಾರೇನಹಳ್ಳಿ(೫ನೇ ವಿಭಾಗ) ಮುಂತಾದ ಅನೇಕ ಹಳ್ಳಿಗಳನ್ನು ತನ್ನೋಡನೆ ವಿಲೀನಗೊಳಿಸಿಕೊಂಡಿದೆ. ಜಯನಗರ ಬಡಾವಣೆಯಲ್ಲಿ ಮುಖ್ಯವಾಗಿ ಒಟ್ಟು ಹತ್ತು ವಿಭಾಗಗಳಿವೆ(ಬ್ಲಾಕ್‌ಗಳು). ಈಗ ಒಂದೊಂದು ವಿಭಾಗದ ಪರಿಚಯವನ್ನು ಮಾಡಿಕೊಳ್ಳೋಣ. ಜಯನಗರ ಒಂದನೇ ವಿಭಾಗ ಲಾಲ್‌ಭಾಗ್‌ನ ಪೂರ್ವಕ

ಪ್ರಾಣಿಬಲಿ - ನಾವು ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ

ಕೆಲವು ದಿನಗಳ ಹಿಂದೆ ಪ್ರಕಟವಾದ ಒಂದು ವರದಿ, ನಾವು ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ ತರಿಸುವಷ್ಟು ಅಮಾನುಷವಾಗಿತ್ತು. ದಾವಣಗೆರೆಯ ದುರ್ಗಾಂಬಿಕಾ ದೇವಿಯ ಜಾತ್ರೆಯಲ್ಲಿ ಕೋಣವನ್ನೂ , ಸಾವಿರಾರು ಕುರಿಗಳನ್ನು, ಕೋಳಿಗಳನ್ನು ಕ್ರೂರ ಮೃಗಗಳ ಹಾಗೆ ಅಟ್ಟಾಡಿಸಿಕೊಂಡು ಭಕ್ತರೆನಿಸಿಕೊಂಡವರು ದೇವಿಗೆ ಬಲಿಕೊಡುವ ನೆಪದಲ್ಲಿ ಕೊಂದುಹಾಕಿದ್ದರು. ಇಂತಹ ಅಮಾನವೀಯ ಘಟನೆಯನ್ನು ನಗರದ ಪೋಲಿಸರು, ಹಿರಿಯರೆನಿಸಿಕೊಂಡವರು ಮೂಕಪ್ರೇಕ್ಷರಂತೆ ನೋಡಿಕೊಂಡು ಸುಮನಿದ್ದರು. ಇದನ್ನು ನೋಡಿದರೆ ಪ್ರಾಣಿಗಳನ್ನು ಬಲಿಕೊಡುವುದು ಕಾನೂನಿನ ಪ್ರಕಾರ ನಿಷೇದವಾಗಿದ್ದರೂ, ಕಾನೂನು ಪಾಲಕರ, ಆಡಳಿತಗಾರರ ಕೃಪೆಯಿಂದಲೇ, ಇದು ಎಲ್ಲಡೆ ಎಗ್ಗಿಲ್ಲದೆ ನಡೆಯುತ್ತಿರುವುದು ವಿಪರ್ಯಾಸವೆನಿಸುತ್ತದೆ. ನಿಜ ಪ್ರಾಣಿಬಲಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಒಂದು ಧಾರ್ಮಿಕ ಆಚರಣೆ. ಇದನ್ನು ಮೂಡನಂಬಿಕೆ ಎಂದು ನಾವು ಎಷ್ಟೇ ಹೇಳಿದರೂ ಹಿಂದಿನಿಂದ ನಡೆದುಕೊಂಡುಬಂದಿರುವ ಜನರನಂಬಿಕೆಯನ್ನು ಬದಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಅಮಾನವೀಯ ಪ್ರಾಣಿಬಲಿಯ ಆಚರಣೆಯ ಹಿಂದಿರುವ ಮೂಡನಂಬಿಕೆಯನ್ನು, ವಾಸ್ತವತೆಯನ್ನು ಜನರಿಗೆ ಸರಿಯಾಗಿ ತಿಳಿಹೇಳಿ ಅವರನ್ನು ಜಾಗೃತಗೊಳಿಸಿ ಇಂತಹ ಅಮಾನುಷ ಆಚರಣೆಯನ್ನು ನಿಲ್ಲಿಸುವಂತೆ ಅವರ ಮನವೊಲಿಸಲು ಪ್ರಜ್ಞಾವಂತರು, ಪ್ರಾಣಿದಯಾ ಸಂಸ್ಥೆಗಳು ಕಾರ್ಯೋನ್ಮುಖರಾಗಬೇಕಿದೆ. ಸಾಮಾನ್ಯವಾಗಿ ದುರ್ಗಿಯ ಗುಡಿ ಅಥವಾ ಅಮ್ಮನ ಗುಡಿಗಳಲ್ಲೇ ಹೆಚ್ಚಾಗಿ ಪ್ರಾಣಿಬಲಿ

ಬಾಲಿವುಡ್ ಮತ್ತು ಕನ್ನಡ ಚಿತ್ರರಂಗ

ಭಾರತೀಯ ಚಿತ್ರರಂಗದ ಹಿರಿಯಣ್ಣನಾದ ಹಿಂದಿ ಚಿತ್ರರಂಗ ೭೦/೮೦ರ ದಶಕದವರೆವಿಗೂ ಒಂದು ರೀತಿಯಲ್ಲಿ ಭಾರತದ ಉಳಿದ ಭಾಷೆಗಳ ಚಿತ್ರರಂಗಕ್ಕೆ ಮಾದರಿಯಾಗಿ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದಿತ್ತು. ಆದರೆ ಅದು ಯಾವಾಗ ಹಾಲಿವುಡ್ ಹೆಸರನ್ನು ಅನುಕರಿಸಿ ಬಾಲಿವುಡ್ ಎಂದು ತನ್ನನ್ನು ಕರೆದುಕೊಂಡಿತೋ ಆಗಲೇ ಹಿಂದಿ ಚಿತ್ರರಂಗಕ್ಕೆ ಹಾಲಿವುಡ್ ಸಂಸ್ಕೃತಿ ದಾಳಿ ಇಟ್ಟು ನಮ್ಮ ಪುರಾತನ ಸಾಂಸ್ಕೃತಿಕ, ಐತಿಹಾಸಿಕ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಿತು ಎನ್ನಬಹುದು. ಸ್ವಂತ ಕಥೆ, ನವಿರಾದ ಹಾಸ್ಯ, ಕೌಟುಂಬಿಕ ಮೌಲ್ಯಗಳು, ಉತ್ತಮ ಸಾಹಿತ್ಯ, ಸೊಗಸಾದ ಸಂಗೀತದಿಂದ ಕೂಡಿ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುತಿದ್ದ ಬಾಲಿವುಡ್ ಚಿತ್ರಗಳಿಗೆ ಇಂದೇನಾಗಿದೆ? ಇತ್ತೀಚೆಗೆ ಬಿಡುಗಡೆಯಾದ “ಬ್ಲಾಕ್” ಎನ್ನುವ ಆಂಗ್ಲ ಹೆಸರಿನ ಬಾಲಿವುಡ್ ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಫ಼ಿಲಮ್‌ಫ಼ೇರ್, ಸ್ಕ್ರೀನ್ ಹಾಗೂ ಇತ್ತೀಚಿನ ಐ‌ಐ‌ಎಫ಼್‌ಎ ಪ್ರಶಸ್ತಿಗಳನ್ನು ಅದು ಬಾಚಿಕೊಂಡಿತ್ತು. ನಾನು ಅದನ್ನು ನೋಡಿಲ್ಲ. ಬಾಲಿವುಡ್ ಚಿತ್ರಗಳನ್ನು ನೋಡುವುದನ್ನು ಬಿಟ್ಟು ಬಹಳ ವರ್ಷವಾಯಿತು. ಬಹುಶ: “ಹಮ್ ಆಪ್ ಕೆ ಹೈ ಕೌನ್” ನಾನು ನೋಡಿದ ಕೊನೆಯ ಹಿಂದಿ ಸಿನಿಮಾ ಇರಬಹುದು. ಈ ಬ್ಲ್ಯಾಕ್ ಚಿತ್ರಕ್ಕಾಗಿ ಗಣ್ಯರಿಗೆಲ್ಲ ಕೋರಮಂಗಲದ ಮಲ್ಟಿಪ್ಲೆಕ್ಸ್‌ನಲ್ಲಿ ವಿಶೇಷ ಪ್ರದರ್ಶನ ಬೇರೆ ಏರ್ಪಡಿಸಿದ್ದರು. ನಮ್ಮ ಚಿತ್ರರಂಗದ ಗಣ್ಯರು, ಕೆಲವು ಸಾಹಿತ

ಅಕ್ಕರೆಯ ದಾವಣಗೆರೆಯ ಬಗ್ಗೆ ಒಂದಿಷ್ಟು ಗರಿಗರಿ ಮಾತು

ದಾವಣಗೆರೆ ಎಂದರೆ ಮೊದಲಿಗೆ ನೆನಪಾಗುವುದು ಬಾಯಲ್ಲಿ ನೀರೂರಿಸುವ ಗರಿಗರಿಯಾದ ಬೆಣ್ಣೆ ದೋಸೆ, ಮಸಾಲೆ ಮಂಡಕ್ಕಿ ಮತ್ತು ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ. ಇದಷ್ಟೇ ಅಲ್ಲ ದಾವಣಗೆರೆ ಮಧ್ಯಕರ್ನಾಟಕದ ಒಂದು ಪ್ರಮುಖ ಶೈಕ್ಷಣಿಕ ಹಾಗೂ ವಾಣಿಜ್ಯ ನಗರಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಿಗುವ ದಾವಣಗೆರೆ, ಬೆಂಗಳೂರಿನಿಂದ ಸುಮರು ೨೬೦ ಕಿ.ಮಿ ದೂರವಿದೆ. ಮೊದಲಿಗೆ ಇದು ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿತ್ತು. ದಿವಂಗತ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ ದಾವಣಗೆರೆಗೆ ಜಿಲ್ಲಾ ಕೇಂದ್ರವಾಗುವ ಸೌಭಾಗ್ಯ ಒದಗಿಬಂತು. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಗಳೂರು, ಹರಿಹರ, ದಾವಣಗೆರೆ ತಾಲ್ಲೂಕುಗಳು, ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ, ಹೊನ್ನಾಳಿ ತಾಲ್ಲೂಕುಗಳು ಮತ್ತು ಬಳ್ಳಾರಿಯ ಹರಪ್ಪನಹಳ್ಳಿ ತಾಲ್ಲೂಕುಗಳನ್ನೊಳಗೊಂಡಂತೆ ದಾವಣಗೆರೆ ಜಿಲ್ಲೆ ಅಸ್ತಿತ್ವಕ್ಕೆ ಬಂತು. ದೇವನಗರಿಯ ಅಪಭ್ರಂಶವೇ ದಾವಣಗೆರೆ ಎಂದು ಸ್ಥಳೀಯ ಇತಿಹಾಸದಿಂದ ತಿಳಿಯುತ್ತದೆ. ಇದು ಉತ್ತರ ಕರ್ನಾಟಕದವರಿಗೆ ದಾವಣಗೇರಿಯಾಗಿದೆ. ದಾವಣಗೆರೆಯು ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವುದರಿಂದ ಇಲ್ಲಿ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗಗಳ ಎರಡು ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಶೈಲಿಗಳು ಮೇಳೈಸಿ ದಾವಣೆಗೆರೆಗೆ ಒಂದು ವಿಶಿಷ್ಟ ಸ್ಥಾನ ನೀಡಿವೆ. ಇಲ್ಲಿ ಉಡುಪಿ ಹೋಟೆಲ್ಲುಗಳ ಜೊತೆ ವೀರಶೈವ ಖಾನಾವಳಿಗನ್ನೂ ಕಾಣಬಹುದು. ದಕ್ಷಿಣದ ರಾಗಿಮುದ

ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ವಿಶ್ಲೇಷಣೆಯಲ್ಲಿ ಮಹಾಭಾರತದ ಕರ್ಣ

ಶ್ರೀ ವೇದವ್ಯಾಸರು ರಚಿಸಿದ ಸಂಸ್ಕೃತ ಮಹಾಕಾವ್ಯವಾದ ಮಹಾಭಾರತ ೧ ಲಕ್ಷ ಶ್ಲೋಕಗಳ ಬೃಹತ್ ಕಾವ್ಯ. ಶ್ರೀ ವೇದವ್ಯಾಸರು ಮಹಾಭಾರತದ ಒಂದು ಪ್ರಮುಖ ಪಾತ್ರವೇ ಆಗಿದ್ದರು. ದೃತರಾಷ್ಟ್ರ, ಪಾಂಡು ಮತ್ತು ವಿಧುರರ ಜನನಕ್ಕೆ ಕಾರಣರಾಗಿ ಕುರುವಂಶವನ್ನು ಉದ್ಧರಿಸಿದವರು. ಕೌರವರು ಹಾಗೂ ಪಂಡವರ ನಡುವೆ ನಡೆದ ಕುರುಕ್ಷೇತ್ರ ಮಹಾಯುದ್ಧವನ್ನು ಕಣ್ಣಾರೆ ಕಂಡಿದ್ದವರು. ಇಂತಹ ವೇದವ್ಯಾಸರು ರಚಿಸಿದ ಮಹಾಭಾರತದಲ್ಲಿನ ಸತ್ಯ ಘಟನೆಗಳು, ನಿಜ ಪಾತ್ರಗಳು ಬೇರೇ ಬೇರೇ ಭಾಷೆಗಳಲ್ಲಿ ರಚಿಸಲ್ಪಟ್ಟ ಮಹಾಭಾರತದಲ್ಲಿ ಮೂಲ ಮಹಾಭಾರತಕ್ಕೆ ವಿರುದ್ಧವಾಗಿ ಬಹಳಷ್ಟು ಬದಲಾವಣೆಗಳನ್ನು ಪಡೆದು ಕೊಂಡಿವೆ. ಕನ್ನಡದಲ್ಲಿ ಹೀಗೆ ಮಹಾಭಾರತವನ್ನು ಆಧರಿಸಿ ರಚಿತವಾದ ಕಾವ್ಯಗಳಲ್ಲಿ ‘ಪಂಪ ಭಾರತ’ ಮತ್ತು ‘ಕುಮಾರವ್ಯಾಸ ಭಾರತ’ ಪ್ರಮುಖವಾದವುಗಳು. ಸಂಸ್ಕೃತ, ಕನ್ನಡ ವಿದ್ವಾಂಸರೂ ಹಾಗೂ ಪ್ರಸಿದ್ಧ ಪ್ರವಚನಕಾರರೂ ಆದ ಪ್ರೊ. ಕೆ.ಎಸ್ ನಾರಾಯಣಾಚಾರ್ಯರು ವಿಶ್ಲೇಷಿಸಿದಂತೆ ವೇದವ್ಯಾಸರ ದೃಷ್ಟಿಯಲ್ಲಿನ ಮಹಾಭಾರತದ ಕರ್ಣನ ಪಾತ್ರವನ್ನು ಈಗ ವಿವೇಚಿಸೋಣ. ನಮಗೆಲ್ಲ ತಿಳಿದಿರುವಂತೆ ನಾವು ಓದಿದ ಪಂಪ ಭಾರತವಿರಲಿ ಅಥವಾ ಕುಮಾರವ್ಯಾಸ ಭಾರತವೇ ಇರಲಿ ಎರಡರಲ್ಲೂ ಕರ್ಣನ ಪಾತ್ರವನ್ನು ಬಹಳ ವೈಭವೀಕರಿಸಿರುವುದನ್ನು ನಾವು ಕಾಣುತ್ತೇವೆ. ಪಂಪ, ಕುಮಾರವ್ಯಾಸರು ಕರ್ಣನನ್ನು ದಾನಶೂರ, ವೀರ ಎಂದು ಹೊಗಳಿದ್ದಾರೆ. ಅವನ ತಾಯಿ ಕುಂತಿ ಮಾಡಿದ ತಪ್ಪಿಗಾಗಿ ಜಿವನ ಪೂರ್ತಿ ಅವನು ಪರಿತಪಿಸುವಂತಾಯಿತು. ಅಂಗರಾಜ್ಯಕ

ರಾಜನ್-ನಾಗೇಂದ್ರ: ಕನಡ ಚಿತ್ರರಂಗ ಕಂಡ ಪ್ರತಿಭಾವಂತ ಸಂಗೀತ ಸಂಯೋಜಕ ಜೋಡಿ

“ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ, ಕಣ್ಣಲ್ಲೇ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ” ನಾ ನಿನ್ನ ಮರೆಯಲಾರೆ ಚಿತ್ರದ ಈ ಹಾಡನ್ನು ಸಂಪಿಗೆ ಚಿತ್ರಮಂದಿರದಲ್ಲಿ ನೋಡಿದಾಗ ನನಗಿನ್ನೂ ಮೀಸೆ ಚಿಗುರಿರಲಿಲ್ಲ! ಆದರೆ ಈ ಹಾಡು ಮತ್ತು ಅದರ ಮಧುರ ಸಂಗೀತ ಸವಿನೆನೆಪಾಗಿ ನನ್ನನ್ನು ಇನ್ನೂ ಕಾಡುತ್ತಿದೆ. ಅಣ್ಣಾವ್ರು ಮತ್ತು ಲಕ್ಷಿ ಈ ಯುಗಳ ಗೀತೆಯನ್ನು ಚಿತ್ರದಲ್ಲಿ ಹಾಡುತ್ತಿದ್ದಾಗ ಅಭಿಮಾನಿಗಳಿಂದ ಅದೇನು ಶಿಳ್ಳೆ! ಅದೇನು ಚಪ್ಪಾಳೆ!. ನಾನಿನ್ನೂ ಮರೆತಿಲ್ಲ ಆ ಕ್ಷಣ. ಈ ಹಾಡಿಗೆ ಸುಮಧುರ ಸಂಗೀತ ಸಂಯೋಜಿಸಿದ್ದು ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಮತ್ತು ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಜೋಡಿ “ರಾಜನ್-ನಾಗೇಂದ್ರ”. ೧೯೬೫ ರಿಂದ ೧೯೯೦ ರವರೆಗೆ ಕನ್ನಡ ಚಿತ್ರ ರಸಿಕರಿಗೆ ಸುಮಧುರ ಗೀತೆಗಳನ್ನು ರಾಜನ್-ನಾಗೇಂದ್ರ ಅವರು ನೀಡಿದ್ದಾರೆ. ಇವರು ಸಂಗೀತ ಸಂಯೋಜಿಸಿದ ಒಂದೊಂದು ಗೀತೆಗಳೂ ವರುಷಗಳು ಉರುಳಿದರೂ ಇನ್ನೂ ಮನಸ್ಸಿನಲ್ಲಿ ಗುನುಗುವಂತೆ ಹಸಿರಾಗಿವೆ. ಎರಡು-ಕನಸು ಚಿತ್ರದ “ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ”, “ತಂನಂ ತಂನಂ ಮನಸು ಮಿಡಿಯುತಿದೆ.. ” ಎಂಬ ಯುಗಳ ಗೀತೆಗಳಿರಿಲಿ ಅಥವಾ “ಪೂಜಿಸಲೆಂದೇ ಹೂಗಳ ತಂದೆ.. ”, “ಇಂದು ಎನಗೆ ಗೊವಿಂದ.. ” ಎಂಬ ಭಕ್ತಿರಸದಿಂದ ಕೂಡಿದ ಗೀತೆಗಳಿರಲಿ, ಎಲ್ಲ ತರಹದ ಗೀತೆಗಳ ಸಂಗೀತ ಸಂಯೋಜನೆಯಲ್ಲೂ ಇವರದು ಎತ್ತಿದಕೈ. ರಾಜನ್-ನಾಗೇಂದ್ರ ಅವರು ಸಂಗೀತ ಸಂಯೋಜನೆಯಲ್ಲಿ ಮಧುರ ರಾಗ ಸಂಯೋಜನೆಯ ಜೊತೆಗೆ,

ತಂಗ್ಯವ್ವ ನೆನಪಾಗುತ್ತಾಳ!

ನಾಗರ ಪಂಚಮಿ, ರಕ್ಷಾಬಂಧನ ಹಬ್ಬಗಳು, ಅಣ್ಣತಂಗಿಯರ/ಅಕ್ಕತಮ್ಮಂದಿರ ಪವಿತ್ರ ಬಾಂಧವ್ಯವನ್ನೇ ಹಬ್ಬವಾಗಿ ಆಚರಿಸುವುದು ಇವುಗಳ ವಿಶೇಷತೆ. ಪಾಶ್ಚಾತ್ಯರಲ್ಲಿ ಪ್ರೇಮಿಗಳ ದಿನವಾದ ವ್ಯಾಲೆಂಟೈನ್ಸ್ ಡೇಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ನಾವು ಭಾರತೀಯರು ಸೋದರ ಸೋದರಿಯರ ನಡುವಿನ ಪರಮಪವಿತ್ರ ಸಂಬಂಧವನ್ನು ನೆನೆಸಿಕೊಂಡು ಅಷ್ಟೇ ಸಂಭ್ರಮದಿಂದ ಆಚರಿಸುವ ಈ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಈ ಸೋದರ ಪ್ರೇಮ ಬರೀ ಒಡಹುಟ್ಟಿದವರಿಗಷ್ಟೇ ಮಾತ್ರ ಸೀಮಿತವಾಗಿಲ್ಲ. ಒಡಹುಟ್ಟಿದ ಸೋದರ-ಸೋದರಿಯರಿಲ್ಲದಿದ್ದರೂ ಬೇರೆಯವರಲ್ಲೇ ಆ ಸೋದರ ಪ್ರೇಮವನ್ನು ಈ ಹಬ್ಬಗಳ ಮೂಲಕ ಕಾಣುವ ಒಂದು ಸುಂದರ ಸಂಸ್ಕೃತಿಯನ್ನು ನಮ್ಮ ಹಿರಿಯರು ನಮಗೆ ಬಿಟ್ಟು ಹೋಗಿದ್ದಾರೆ. ಅಣ್ಣತಂಗಿಯರ ಸಂಬಂಧವನ್ನು ನಮ್ಮ ದೇಶದ ಮಹಾಕಾವ್ಯವಾದ ಮಹಾಭಾರತದಲ್ಲೇ ಬಹಳ ಮನೋಜ್ಞವಾಗಿ ಚಿತ್ರಿಸಿರುವುದನ್ನು ನಾವು ಕಾಣಬಹುದು. ಕೌರವರಿಂದ ಅನೇಕ ರೀತಿಯಲ್ಲಿ ಸಂಕಷ್ಟಗಳನ್ನು ಅನುಭವಿಸಿದವಳು ಪಂಚಪಾಂಡವರ ಪತ್ನಿ ದ್ರೌಪದಿ. ತುಂಬಿದ ಸಭೆಯಲ್ಲಿ ದುರುಳ ದು:ಶ್ಯಾಸನ ಪತಿವ್ರತೆಯಾದ ದ್ರೌಪದಿಯನ್ನು ಎಳೆದು ತಂದು ಅವಳ ವಸ್ತ್ರಾಪಹರಣ ಮಾಡುತ್ತಿದ್ದಾಗ, ತನ್ನ ಐವರು ಗಂಡಂದಿರೂ ಅವಳ ಸಹಾಯಕ್ಕೆ ಬರಲಾಗದೆ ತಲೆತಗ್ಗಿಸಿರುತ್ತಾರೆ. ಆಗ ಅವಳಿಗೆ ಬೇರೆ ಗತಿ ಕಾಣದೆ ತನ್ನ ಅಣ್ಣನಂತೆ ಇರುವ ಶ್ರೀಕೃಷ್ಣನ ನೆನಪಾಗಿ, ರಕ್ಷಿಸುವಂತೆ ಅವನನ್ನೇ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣ ತನ್ನ ತಂಗಿಯಾದ ದ್ರೌಪದಿ೦ii

ಶ್ರೀಮದ್ರಾಮಾಯಣದ ಪ್ರತ್ಯಕ್ಷ ಸಾಕ್ಷಿಯಾದ ಶ್ರೀರಾಮಸೇತುವೆ ಉಳಿಯುವುದೇ?

ಶ್ರೀಮದ್ರಾಮಾಯಣದ ಸೀತಾನ್ವೇಷಣೆಯ ಸನ್ನಿವೇಶ. ಹನುಮಂತನು ಸೀತೆಯನ್ನು ಹುಡುಕಲು ನೂರು ಯೋಜನಗಳಷ್ಟು ವಿಸ್ತಿರ್ಣವಾದ ಸಮುದ್ರವನ್ನು ದಾಟಿ ರಾವಣನ ಲಂಕಾಪುರಿಯನ್ನು ಸೇರಿದನು. ಅಲ್ಲಿ ಅಶೋಕವನದಲ್ಲಿ ಸೀತೆಯನ್ನು ಕಂಡು, ಶ್ರೀರಾಮನ ಗುರುತಿನ ಉಂಗುರವನ್ನು ಕೊಟ್ಟನು. ಸೀತಾಮಾತೆಗೆ ರಾಮನ ಸಂದೇಶವನ್ನು ತಿಳಿಸಿ ಸಮಾಧಾನ ಪಡಿಸಿ, ರಾವಣ ಪುತ್ರ ಅಕ್ಷಯಕುಮಾರನನ್ನು ಕೊಂದು ಇಡೀ ಲಂಕಾಪುರಿಯನ್ನೇ ತನ್ನ ಬಾಲದ ಬೆಂಕಿಯಿಂದ ಸುಟ್ಟು ಮತ್ತೆ ಸಾಗರವನ್ನು ದಾಟಿ ಹಿಂತಿರುಗಿ ಶ್ರೀರಾಮನಿಗೆ ಸೀತೆಯನ್ನು ಕಂಡು ಹಿಡಿದ ಪ್ರಿಯವಾರ್ತೆಯನ್ನು ತಿಳಿಸಿದನು. ಸಂತೋಷಭರಿತನಾದ ಶ್ರೀರಾಮನು ರಾವಣನ ಸೆರೆಯಿಂದ ಸೀತೆಯನ್ನು ಬಿಡಿಸಿ ತರಲು ಸುಗ್ರೀವಾದಿ ವಾನರ ಸೈನ್ಯದ ಸಮೇತ ಈಗಿನ ರಾಮೇಶ್ವರದ ಬಳಿಯಿರುವ ದನುಶ್ಕೋಟಿಯ ಸಮುದ್ರತೀರಕ್ಕೆ ಬಂದನು. ಎದುರಿಗೆ ವಿಶಾಲವಾದ ಮಹಾಸಾಗರ. ರಾಮನಿಗೆ ಸೀತೆಯನ್ನು ರಾವಣನ ಸೆರೆಯಿಂದ ಬಿಡಿಸಲು ಈ ಮಹಾಸಮುದ್ರವನ್ನು ವಾನರ ಸೈನ್ಯದೊಂದಿಗೆ ಹೇಗೆ ದಾಟಬೇಕೆಂಬ ಚಿಂತೆ ಶುರುವಾಯಿತು. ಆ ಮಹಾಸಮುದ್ರವನ್ನು ದಾಟಲು ಸಹಾಯಮಾಡುವಂತೆ ರಾಮಚಂದ್ರ ಸಮುದ್ರರಾಜನನ್ನೇ ಪ್ರಾರ್ಥಿಸಿದನು. ಮೂರುದಿನ ಪ್ರಾರ್ಥಿಸಿದರೂ ಸಮುದ್ರರಾಜನು ಪ್ರತ್ಯಕ್ಷವಾಗದಿದ್ದಾಗ ಶ್ರೀರಾಮನು ಅತ್ಯಂತ ಕೋಪಾವೇಶದಿಂದ ಸಮುದ್ರವನ್ನೇ ತನ್ನ ಬಾಣಗಳಿಂದ ಇಂಗಿಸುವುದಾಗಿ ಬಿಲ್ಲನೆತ್ತಿದನು. ಆಗ ಭಯದಿಂದ ಸಮುದ್ರರಾಜನು ರಾಮನ ಮುಂದೆ ಪ್ರತ್ಯಕ್ಷನಾಗಿ ಸಮುದ್ರವನ್ನು ದಾಟಲು ಸಾಧ್ಯವಾಗುವಂತೆ